Thursday, June 24, 2010

ಪ್ರಿತಿಯ ಲೆಖ್ಖ

















ನಾನು ದಿನಗಳನ್ನು
ಕೂಡಿಸಿದಂತೆಲ್ಲಾ
ನೀನು ತಿಂಗಳಿನಿಂದ
ಕಳೆಯುತ್ತಾ ಹೋದೆ
ಅದಕ್ಕೆ ಏನೋ
ನಾ...ನಿನಗೆ
ನೀ...ನನಗೆ
ಅಜಗಜಾಂತರ ದೂರ
ಆದರೆ ಈ
ಲೆಖ್ಕ ಹಾಕುವ
ಸವಿ ನೆನೆಪುಗಳೇ
ಗುಣಕಗಳಾ ಪರಿವರ್ತನೆ ಹೊಂದಿ
ಹೃದಯವನ್ನು
ಭಾಗಿಸಿದಾಗಲೆಲ್ಲ
ಮತ್ತೆ ಮತ್ತೆ
ಉಳಿಯುವ ನಿನ್ನ
ಆ - ಶೇಷಗಳು....
ಸೂತ್ರಗಳು ....
ಕತ್ತಲಲ್ಲಿ
ಉಸಿರಾಡುತ್ತವೆ.


ಚಿತ್ರ ಕೃಪೆ:farm2

Tuesday, June 8, 2010

ನೆನಪುಗಳು
























ನೆನಪುಗಳು
ಸಿ(ಕ)ಹಿಯನ್ನು
ಸೃಷ್ಟಿಸಬಹುದು
ಆದ್ರೆ ಭಾವನೆಗಳು?
             ದೇಹವನ್ನು ಕೊರೆದು ಕೊರೆದು
             ಜಾಡನ್ನು ಮಾಡುವಾಗ
             ಹೃದಯ
             ಕಲ್ಲಾಗಿ,ಹಸಿ ಮೇಣವಾಗಿ
             ಕರಗಿ,ನೀರಾಗಿ,
             ಬಿಸಿ ನೀರಿನ ಬುಗ್ಗೆಗಳಾಗಿ
             ಚಿಮ್ಮಿ,ಚಿಮ್ಮಿ ಹರಿದು
             ಸತ್ವಹೀನವಾಗಿ
             ಸಂಕುಚನಗೊಂಡು
             ಮಲಗಿ
             ಮಲಗುವಾಗ
             ಮತ್ತೆ ಪ್ರೀತಿಯ
             ಸೆಲೆ
             ಸೃಷ್ಟಿಸುವ ಈ
             ಅನುಭವಗಳು
             ನೆನೆಪಾದಾಗ
             ನೆನಪುಗಳ
             ಅನುಭವಗಳು
             ಕ್ಷಣಿಕವಾಗುತ್ತವೆ.


ಚಿತ್ರ ಕೃಪೆ:fc01.deviantart

ಕನಸುಗಳ ರೂಪ























ಶಾಪಗ್ರಸ್ಥರಂತೆ
ಸಾವಿರ ಸಾವಿರ ಶತಮಾನದಿ
ಬಿಸಿಲು,ಗಾಳಿ,ಮಳೆಗಳ ಕೊರೆತಕ್ಕೆ
ಕಾಡು ಬಂಡೆಯಾಗಿ ದಿಗಂತದಲ್ಲಿ
ನಿಂತಿದ್ದ ನಮ್ಮನ್ನು
ಕೆಳಗಿಳಿಸಿ,ಚಾಣ,ಸುತ್ತಿಗೆಯಿಂದ
ಕಡಿದು,ಬಡಿ-ಬಡಿದು
ನೀನು ಬೆವರಿಳಿಸಿದಂತೆಲ್ಲಾ
ನಾವು ಅಂತರ್ಮುಖಿಯಾಗಿ ನಿನ್ನ
ಶಿಲ್ಪ ಚೈತನ್ಯವನ್ನು ಹಾಡಿ,ಹೊಗಳಿದ್ದು
ಕಾಣಿಸಲಿಲ್ಲ,ಕೇಳೀಸಲಿಲ್ಲ
ಓ ಅಮರ ಶಿಲ್ಪಿಯೇ
ಇನ್ನು ನಮ್ಮ ಹೃದಯವ
ತಟ್ಟಿ ತಟ್ಟಿ ನೋಯಿಸಬೇಡ
ಈಗಾಗಲೇ ನಾವು
ನಿನ್ನ ಕನಸುಗಳ
ಸುಂದರ ಶಿಲ್ಪಗಳ
 ರೂಪ ಹೊಂದಿದ್ದೇವೆ
ರೂಪ ಹೊಂದಿದ್ದೇವೆ.

ಚಿತ್ರ ಕೃಪೆ:totalmel

Monday, May 10, 2010

ಮನಸು



















ಓ,
ಮನಸು, ಬಿತ್ತದಿರು ಭಾವನೆಗಳ ಕನಸು
ಇರುವದೆಂತು ಸೊಗಸು
ಆಗುವದೆಂದು ನನಸು||


ಚಂಚಲತೆಯ ಮೂಡಿಸಿ ಮಾಡದಿರು
ನೀ ಹೃದಯ ಘಾಸಿ
ಹೂವಕಂಪ ತೋರಿಸಿ
ಬರಿ ಬಾನನಲಿ ಹಾರಾಡಿಸಿ||


ಎಲ್ಲೆಲ್ಲಿಯೊ ಓಡಾಡಿಸಿ
ಬಿಸಿಲ ಕುದುರೆನೇರಿಸಿ
ಮರೀಚಿಕೆ ನೀ ಮಾಡಿಸಿ||


ಕನ್ನಡಿ ಎದುರು ನಿಂತ ಬಾಲೆಗೆ
ನೂರೆಂಟು ಆಸೆಗಳ ನೀ ತುಂಬದಿರು
ಕಂಡರಿಯದ ದುಂಬಿಯನು
ನೀ ಎದುರು ಕರೆಸದಿರು||


ಪ್ರೇಮ ಕಾಮಗಳನು ತುಂಬಿಸಿ
ನಗುತ ನಿಲ್ಲದಿರು
ಜಾತಿ-ಭೇಧ,ಕೋಮುಗಲಭೆ
ನಡೆಸಿ ಮಾಯಾವಾಗಿ ಎಲ್ಲಿಗೊ
ಹೋದ ಮನಸು ಕವಿಯ
ಕಲ್ಪನೆಗೆ ಇದು ಇನ್ನೂ ಕೂಸು||

Sunday, April 25, 2010

ಎಂದೂ ಮರೆಯದ ಹಾಡು




Rim-Jhim Gire Saavan, Sulag Sulag Jaae Man
Bhiige Aaj Is Mausam Me.N, Lagii Kaisii Ye Agan
Rim-Jhim Gire Saavan ...

Pahale Bhii Yuu.N To Barase The Baadal,
Pahale Bhii Yuu.N To Bhiigaa Thaa Aa.Nchal
Ab Ke Baras Kyuu.N Sajan, Sulag Sulag Jaae Man
Bhiige Aaj Is Mausam Me.N, Lagii Kaisii Ye Agan
Rim-Jhim Gire Saavan ...


Is Baar Saavan Dahakaa Huaa Hai,
Is Baar Mausam Bahakaa Huaa Hai
Jaane Piike Chalii Kyaa Pavan, Sulag Sulag Jaae Man
Bhiige Aaj Is Mausam Me.N, Lagii Kaisii Ye Agan
Rim-Jhim Gire Saavan ...

ಅಂತು ಮಳೆಯ ದಿನಗಳು ಅಲ್ಲಲ್ಲಿ ಶುರುವಾಗಿ ಬಿಟ್ಟಿದೆ ಮೊನ್ನೆ ನಮ್ಮೂರಲ್ಲೂ ಮಳೆಯ ಆರ್ಭಟ ಏನು ಕಮ್ಮಿ ಇರ್ಲಿಲ್ಲಾ , ಮೋದಲ ಮಳೆಯಲ್ಲಿ ತೋಯ್ದು ಮನೆಯಲ್ಲಿ System  ನಲ್ಲಿ ಮಳೆಯ ದಿನಗಳನ್ನು ನೆನಪಿಸುವ ಒಂದಿಷ್ಟು ಹಾಡುಗಳನ್ನು ಕೇಳಬೇಕು ಎಂಬ ಬಯಕೇಯಿಂದ youtube ಗೆ ಮೋರೆ ಹೋದೆ ಅಲ್ಲಿ ಸಿಕ್ಕಿದ್ದು ಈ ಹಾಡು Wow! ಏನ್ ಹಾಡುರೀ. ಲತಾ ಮಂಗೇಷ್ಕರ ಎಲ್ಲರ ಮನಸ್ಸನ್ನ ಮುಂಬೈನ ಮಳೆಯಲ್ಲಿ ತೇಲುವ ಹಾಗೆ ಮಾಡಿದ್ದಾರೆ.ನಿಜವಾಗಿಯೂ ಲತಾ ಈ ಹಾಡನ್ನಾ ತುಂಬಾನೆ ಎತ್ತರಕ್ಕೆರಿಸಿದ್ದಾರೆ . . ಪ್ರತಿಯೊಬ್ಬ ಪ್ರೇಮಿಯು ಕೇಳಲೇ ಬೇಕಾದ ಹಾಡುಗಳ ಪಟ್ಟೀಯಲ್ಲಿ ಇದನ್ನೂ ಸೇರಿಸಲೇ ಬೇಕು ಅಷ್ಟು Perfect ಆಗಿದೆ.


ಆ ಇಬ್ಬರು ಪ್ರೇಮಿಗಳು ಮುಂಬೈನ ಹಾದಿ ಬಿದಿಗಳಲ್ಲಿ ಎಷ್ಟು ಸಂತೋಷದಿಂದ ಓಡಾಡುತ್ತಿದ್ದಾರೆ.ಎಲ್ಲಿಯೂ ನಿಮಗೆ ಕಾಣುವುದೆ ಇಲ್ಲ ಇದು Shooting ಅಂತ So pure, So Real.ಈ ಹಾಡಿನ Picturization ಹಾಗಿದೆ. ಎಲ್ಲಿಯು Special effects ಎಲ್ಲಾ.ಮುಂಬೈನ ಮಾನ್ ಸೂನ ಮಳೆ ಎಂದರೆ ಹೇಳಾಬೇಕೆ ಅಂಥಹ ನಿಜವಾದ ಮಳೆಯಲಿ ಈ ಚಿತ್ರಿಕರಣ ಮಾಡಿದ್ದಾರೆ.ಅಮಿತಾಬ್ ಮತ್ತು ಮೌಶ್ಮಿ ಯ Acting ಎಷ್ಟು ರಿಯಲ್ ಆಗಿದೆ.ಆ ಇಬ್ಬರ ನಡೂವೆ ಮುಂಬೈಯ ಪಕ್ಕಾ "ಮದುಮಗಳಂತೆ ಕಾಣುತ್ತಿದೆ" ಈ ಮಳೆಯಲ್ಲಿ. ಅದೇನೋ ಗೊತ್ತಿಲ್ಲ ತುಂಬಾನೆ ಮನಸ್ಸಿಗೆ ಹಿಡಿಸಿ ಬಿಡ್ತು . ನನ್ನ ಕನಸಿನ ಲೋಕದೋಳಗೆ ನಾನು ಸಹ ಮುಂಬೈನ ಚೌಪಾಟೀಯಲ್ಲಿ ಒಂದು ಸುತ್ತು ಹಾಕಿಬಂದಂತಾಯಿತು . .Thank you for such a grate song ..




Wednesday, April 7, 2010

ಕಪ್ಪು ಸುಂದರಿ(ಗೆ)

























ಕೊರಗುವೇ ಏಕೆ
ಮರಗುವೇ ಏಕೆ ನೀ ಕಪ್ಪು ಎಂದು
ಕಪ್ಪು ಕಳೆ ಅಲ್ಲವೇ
ಕಪ್ಪು ಮೋಡದಿಮ್ದ ತಾನೇ ಮಳೆ ಗೊತ್ತಿಲ್ಲವೇ . .


ಓ, ಕಪ್ಪು ಮಲ್ಲಿಗೆ ಹೋಗುವೆ ಎಲ್ಲಿಗೆ?
ಮುಗುಳು ನಗೆ ಬೀರು ಮೆಲ್ಲಗೆ
ಬಿಸಿ ಮುತ್ತ ನೀಡು ಕೆನ್ನೆಗೆ ..
ಬಳಕುವ ಲತೆ ನೀನು
ಹಾಡುವ ಗೀತೆ ನೀನು
ನಿನ್ನ ರೂಪಕೆ ಸೋತೆ ನಾನು ..


ಬಿಸಿ ಮಾತು ನೀನು
ತುಸು ಕೋಪ ಏಕೆ ಇನ್ನು?
ಕಪ್ಪು ಮುಖದಲಿ ಆಸೆ ಏನೇನು?
ಎನ್ನ ಹೃದಯಾಂತರದ ಕನಸೇ ನೀನು


 
ಚಿತ್ರ ಕೃಪೆ : cqcentral.com

Thursday, March 25, 2010

ವಾಸ್ತವ

























ನಿನ್ನಲ್ಲಿರುವಾಗ ಸಿರಿ ಸಂಪತ್ತು
ಸುತ್ತುವರೆಲ್ಲಾ ನಿನ್ನ ಮನೆಯವಾ
ಕಾಯುವರು ರಾತ್ರಿ ಹಗಲೆನ್ನದೆ ನಿನ್ನ
ಸಂಭಂಡಗಳ ಬೆಸೆತುವರು ಅತೀ ಮುನ್ನ||


ನೀನೇ ಇಂದ್ರ , ನೀನೇ ಚಂದ್ರ ಅನ್ನುವರು
ನೀನೇ ಶಾರುಖ್ ನೀನೇ ಸಲ್ಮಾನ
ನಾವೆಲ್ಲಾ ಇನ್ನು ನಿನಗೆ ಗುಲಾಮ
ಹಚ್ಚುವರು ಕಳ್ಳ ಪ್ರೀತಿಯ ಮಲಾಮ ||


ನಿನ್ನಲ್ಲಿ ಇರದಿರುವಾಗ ಸಿರಿ ಶ್ರೀಮಂತಿಕೆ
ನಾನ್ಯಾರೋ ನೀನ್ಯಾರೋ ಎಂದ್ಳೇಳುವರು
ನಿನ್ನ ಮನೆ ಮುಂದೇ ಕಣ್ಣು ಮುಚ್ಚಿನಡೆವರೋ
ಎದುರು ಬಂದರೆ ಕತ್ತು ಕೆಳಗೆ ಚಲ್ಲುವರೋ
ಇವರು ನಮ್ಮವರು ನಿಮ್ಮವರು
ಬೆನ್ನ ಹಿಂದೆ ನಿಂಟು ನಗುವವರು ||



ಚಿತ್ರ ಕೃಪೆ : s3.images.com

ಧೂಳು ಕಣವಾದರೂನು ಏಳುತ್ತೆನೆ.