ಸಾವಿರ ಸಾವಿರ ಶತಮಾನದಿ
ಬಿಸಿಲು,ಗಾಳಿ,ಮಳೆಗಳ ಕೊರೆತಕ್ಕೆ
ಕಾಡು ಬಂಡೆಯಾಗಿ ದಿಗಂತದಲ್ಲಿ
ನಿಂತಿದ್ದ ನಮ್ಮನ್ನು
ಕೆಳಗಿಳಿಸಿ,ಚಾಣ,ಸುತ್ತಿಗೆಯಿಂದ
ಕಡಿದು,ಬಡಿ-ಬಡಿದು
ನೀನು ಬೆವರಿಳಿಸಿದಂತೆಲ್ಲಾ
ನಾವು ಅಂತರ್ಮುಖಿಯಾಗಿ ನಿನ್ನ
ಶಿಲ್ಪ ಚೈತನ್ಯವನ್ನು ಹಾಡಿ,ಹೊಗಳಿದ್ದು
ಕಾಣಿಸಲಿಲ್ಲ,ಕೇಳೀಸಲಿಲ್ಲ
ಓ ಅಮರ ಶಿಲ್ಪಿಯೇ
ಇನ್ನು ನಮ್ಮ ಹೃದಯವ
ತಟ್ಟಿ ತಟ್ಟಿ ನೋಯಿಸಬೇಡ
ಈಗಾಗಲೇ ನಾವು
ನಿನ್ನ ಕನಸುಗಳ
ಸುಂದರ ಶಿಲ್ಪಗಳ
ರೂಪ ಹೊಂದಿದ್ದೇವೆ
ರೂಪ ಹೊಂದಿದ್ದೇವೆ.
ಚಿತ್ರ ಕೃಪೆ:totalmel
ಚಿತ್ರ ಕೃಪೆ:totalmel
ಅದಾವ ಅಮರ ಶಿಲ್ಪಿಯ ನೆನಪೋ............
ReplyDeleteಚೆನ್ನಾಗಿದೆ.
nenapanna nenalle kollabeku......... chennaagide kavana......
ReplyDelete@ ಮನದಾಳದಿಂದ -> ಮನದ ಮಡಿಲಲ್ಲಿ ಬಚ್ಚಿಟ್ಟ ನನ್ನಾಕೆಯ ಕನಸು . . ;) ತುಂಬ ಧನ್ಯವಾದ.
ReplyDeleteThis comment has been removed by the author.
ReplyDelete@ ದಿನಕರ್ -> ಧನ್ಯವಾದ .:)
ReplyDeleteನಿಮ್ಮ ಬ್ಲಾಗಿನ ವಿನ್ಯಾಸ ಏನು ಒಂದು ರೀತಿ ತಂಪೆರುಗುವಂತಿದೆ.... ಇಷ್ಟವಾಯಿತು ನಿಮ್ಮ ಬ್ಲಾಗ್ ಹಾಗೂ ಬರಹಗಳು
ReplyDeleteಕವನ ಇಷ್ಟವಾಯಿತು
nice blog, ತುಂಬ ಸೂಕ್ತವಾದ ಚಿತ್ರಗಳನ್ನು ಬಳಸಿಕೊಂಡಿದ್ದೀರಿ.ಈ ಕವನ ಇಷ್ಟವಾಯ್ತು
ReplyDelete