ಓ,
ಮನಸು, ಬಿತ್ತದಿರು ಭಾವನೆಗಳ ಕನಸು
ಇರುವದೆಂತು ಸೊಗಸು
ಆಗುವದೆಂದು ನನಸು||
ಚಂಚಲತೆಯ ಮೂಡಿಸಿ ಮಾಡದಿರು
ನೀ ಹೃದಯ ಘಾಸಿ
ಹೂವಕಂಪ ತೋರಿಸಿ
ಬರಿ ಬಾನನಲಿ ಹಾರಾಡಿಸಿ||
ಎಲ್ಲೆಲ್ಲಿಯೊ ಓಡಾಡಿಸಿ
ಬಿಸಿಲ ಕುದುರೆನೇರಿಸಿ
ಮರೀಚಿಕೆ ನೀ ಮಾಡಿಸಿ||
ಕನ್ನಡಿ ಎದುರು ನಿಂತ ಬಾಲೆಗೆ
ನೂರೆಂಟು ಆಸೆಗಳ ನೀ ತುಂಬದಿರು
ಕಂಡರಿಯದ ದುಂಬಿಯನು
ನೀ ಎದುರು ಕರೆಸದಿರು||
ಪ್ರೇಮ ಕಾಮಗಳನು ತುಂಬಿಸಿ
ನಗುತ ನಿಲ್ಲದಿರು
ಜಾತಿ-ಭೇಧ,ಕೋಮುಗಲಭೆ
ನಡೆಸಿ ಮಾಯಾವಾಗಿ ಎಲ್ಲಿಗೊ
ಹೋದ ಮನಸು ಕವಿಯ
ಕಲ್ಪನೆಗೆ ಇದು ಇನ್ನೂ ಕೂಸು||
ಮನಸ್ಸಿಗೆ ಬುದ್ಧಿವಾದ ಹೇಳಿದ ರೀತಿ ಇಷ್ಟವಾಯ್ತು.
ReplyDeleteಚೆನ್ನಾಗಿ ಮೂಡಿಬಂದಿದೆ ಕವನ.
@ ಮನದಾಳದ ಮಾತಿನಿಂದ -> ಧನ್ಯವಾದ . .;)
ReplyDeleteಗುಡ್ ಗುಡ್ :)
ReplyDeletevery nice poem. and for ur previous post, a song which i love very much. that is the first song i always start to sing whenever rain starts. thank u very much ..
ReplyDelete@ ಗೌತಮ್ -> ಧನ್ಯವಾದ ಗೌತಮ್ ಅವರಿಗೆ.
ReplyDelete@ NRK -> Thanks you Boss!! yes u are ryte that songs is really awesome . .!
ReplyDeleteಒಳ್ಳೆಯ ಕವನ...
ReplyDelete@ Raghu ->Dhanyavada Raghu , ,
ReplyDelete