ನಾನು ದಿನಗಳನ್ನು
ಕೂಡಿಸಿದಂತೆಲ್ಲಾ
ನೀನು ತಿಂಗಳಿನಿಂದ
ಕಳೆಯುತ್ತಾ ಹೋದೆ
ಅದಕ್ಕೆ ಏನೋ
ನಾ...ನಿನಗೆ
ನೀ...ನನಗೆ
ಅಜಗಜಾಂತರ ದೂರ
ಆದರೆ ಈ
ಲೆಖ್ಕ ಹಾಕುವ
ಸವಿ ನೆನೆಪುಗಳೇ
ಗುಣಕಗಳಾ ಪರಿವರ್ತನೆ ಹೊಂದಿ
ಹೃದಯವನ್ನು
ಭಾಗಿಸಿದಾಗಲೆಲ್ಲ
ಮತ್ತೆ ಮತ್ತೆ
ಉಳಿಯುವ ನಿನ್ನ
ಆ - ಶೇಷಗಳು....
ಸೂತ್ರಗಳು ....
ಕತ್ತಲಲ್ಲಿ
ಉಸಿರಾಡುತ್ತವೆ.
ಚಿತ್ರ ಕೃಪೆ:farm2
ಚಿತ್ರ ಕೃಪೆ:farm2
niceone.........
ReplyDelete@ ಮನದಾಳದಿಂದ -> ಧನ್ಯವಾದ ಸರ್.
ReplyDeleteಚೆನ್ನಾಗಿದೆ ಇಷ್ಟವಾಯಿತು :)
ReplyDelete