ಕೊರಗುವೇ ಏಕೆ
ಮರಗುವೇ ಏಕೆ ನೀ ಕಪ್ಪು ಎಂದು
ಕಪ್ಪು ಕಳೆ ಅಲ್ಲವೇ
ಕಪ್ಪು ಮೋಡದಿಮ್ದ ತಾನೇ ಮಳೆ ಗೊತ್ತಿಲ್ಲವೇ . .
ಓ, ಕಪ್ಪು ಮಲ್ಲಿಗೆ ಹೋಗುವೆ ಎಲ್ಲಿಗೆ?
ಮುಗುಳು ನಗೆ ಬೀರು ಮೆಲ್ಲಗೆ
ಬಿಸಿ ಮುತ್ತ ನೀಡು ಕೆನ್ನೆಗೆ ..
ಬಳಕುವ ಲತೆ ನೀನು
ಹಾಡುವ ಗೀತೆ ನೀನು
ನಿನ್ನ ರೂಪಕೆ ಸೋತೆ ನಾನು ..
ಬಿಸಿ ಮಾತು ನೀನು
ತುಸು ಕೋಪ ಏಕೆ ಇನ್ನು?
ಕಪ್ಪು ಮುಖದಲಿ ಆಸೆ ಏನೇನು?
ಎನ್ನ ಹೃದಯಾಂತರದ ಕನಸೇ ನೀನು
ಚಿತ್ರ ಕೃಪೆ : cqcentral.com
ಅಹ ಮಧುರ ಗೀತೆಯೇ,
ReplyDeleteಪ್ರಣಯ ಗೀತೆಯೇ
ನಿಮ್ಮ ಸುಂದರಿ ಬೇಗ ಬರಲಿ ನಿಮ್ಮ ಬಳಿಗೆ
nice poem.
ReplyDelete@ Dr.Gurumurthy(ಸಾಗರದಾಚೆ ಇಂಚರ) -> ಮನದಾಳದ ಧನ್ಯವಾದ . .
ReplyDelete@ ಮನಮುಕ್ತಾ -> ತುಂಬು ಹೃದಯದ ಧನ್ಯವಾದ ಸಹೋದರಿ . .:)
ReplyDeleteಕಣ್ಣ ಗುಡ್ಡೆ ಕಪ್ಪು ,ಕೂದಲ ಬಣ್ಣ ಕಪ್ಪು ,ಮಳೆ ತರುವ ಮೋಡ ಕಪ್ಪು !ಕಪ್ಪಲೇನು ತಪ್ಪು ?ಕಪ್ಪು ನನಗೆ ಒಪ್ಪು !ಕವನ ಚೆನ್ನಾಗಿದೆ.ನನ್ನ ಬ್ಲಾಗಿಗೂ
ReplyDeleteಒಮ್ಮೆ ಬನ್ನಿ ಆಯ್ತಾ?
@ Dr.ಕೃಷ್ಣಮೂರ್ತಿ -> ಧಯ್ನವಾದ ಸರ್ . . .ಕಪ್ಪು ಯಾವಾಘಲೂ ಒಪ್ಪು . .ಯಾಕೆಂದರೆ It nev loose its originality . . ;)
ReplyDelete