Friday, October 29, 2010

ರಭಸದ ಗೆಲುವುಗಳು





ಕೊನೆಯವರೆಗೂ
ಶಾಶ್ವತ ಗೆಲುವಾಗಲೆಂದು
ಬಾವನೆಗಳ ಆಣೆಕಟ್ಟು ಕಟ್ಟಿ
ಸಹಜ, ಸರಲ
ಜೀವನಕೆ ಎದುರಾಗಿ
ಮರೆಯಾಗಿ
ಅಡ್ಡನಿಂತ
ಗೆಲುವಿನೆಲೆಗಳ ರಭಸದ
ಒತ್ತಡಕೆ 
ಸುಳಿಯಾಗಿ 
ಪಾತಾಳಕ್ಕಿಳಿದು
ಮತ್ತೇ ಮೇಲೆದ್ದು
ಬಂದಾಗ ಈ ದೇಹ
ಶವವಾಗಿ ತೇಲಿಹೋದ
ತಪ್ಪಲಿನಂತೆ
ದಡಕ್ಕಪ್ಪಳಿಸಿ ಬಿದ್ದಿರುವೆ.






ಚಿತ್ರ ಕೃಪೆ: fineartamerica

11 comments:

  1. ಅರ್ಥಗರ್ಭಿತ ಕವನ,
    ಚೆನ್ನಾಗಿದೆ.

    ReplyDelete
  2. ಕವನ ಚೆ೦ದವಿದೆ. ನಿರಾಶೆ ಯಾಕೆ ಸರ್?

    ಅನ೦ತ್

    ReplyDelete
  3. ಕವನ ಸೊಗಸಾಗಿದೆ. ಜೀವನದಲ್ಲಿ ಸೋಲು,ಗೆಲವು ಇದ್ದದ್ದೇ.ನಿರಾಶರಾಗಬೇಡಿ.

    ReplyDelete
  4. ಚಂದದ ಕವನ.ನನ್ನ ಬ್ಲಾಗಿನ ಬರಹ ಶತಕ ಪೂರೈಸಿದೆ.ಶತಕದ ಸಂಭ್ರಮ ದಲ್ಲಿ ಪಾಲ್ಗೊಳ್ಳಲು ನನ್ನ ಬ್ಲಾಗಿಗೆ ಸ್ವಾಗತ.ನಮಸ್ಕಾರ.

    ReplyDelete
  5. @ Praveen -> ತುಂಬು ಹೃದಯದ ಧನ್ಯವಾದ ಸರ್.

    ReplyDelete
  6. @ anantaraj -> ಒಮ್ಮೊಮ್ಮೆ ಇಂಥಾ ಭಾವನೆಗಳು ನೂ ಬೇಕಲ್ಲಾ ಸರ್ ..ಬರೀ ಸಂತೋಷದ ಕ್ಷಣಗಳೇ ಆಗಿ ಬಿಟ್ರೆ ಜೀವನಕ್ಕೆ ಪ್ರಾಮುಖ್ಯರೆ ಇರುತ್ತಿತ್ತಾ?

    ಧನ್ಯವಾದ .

    ReplyDelete
  7. @ Sunaath -> ಧನ್ಯವಾದ , ಸೋಲನ್ನು ಗೆದ್ದು ಗೆಲುವಿನೆಡೆಗೆ ಬಂದಾಗ ಆದರ ಅನುಭವವೇ ಬೇರೆ ಇರುತ್ತದೆ ಅಂತ ಓದಿದ್ದೆ ಅದರ ಅನುಭವ ಪಡಿಯಬೇಕಾಗಿದೆ.

    ಧನ್ಯವಾದ.

    ReplyDelete
  8. @ Murthy sir-> ಧನ್ಯವಾದ ಸರ್ ..ಖಂಡಿತವಾಗಿ ಬರುವೆ.

    ReplyDelete
  9. ಸೋಲು ಗಲುವನ್ನು ಸಮಾನವಾಗಿ ಸ್ವೀಕರಿಸುವುದೇ ಜೀವನ ಸ೦ಜು ಅವರೇ.ಚೆ೦ದದ ಕವನಕ್ಕೆ ಅಭಿನ೦ದನೆ."ಸರಲ" ಇದು ಸರಳ ಎ೦ದಾಗಬೇಕಿತ್ತೆ೦ದು ನನ್ನ ಭಾವನೆ.ಹಾಗೆಯೇಬಭೇಟಿ ಕೊಡಿ ನನ್ನ ಬ್ಲಾಗ್ ಗೆ http:// muliyala.blogspot.com

    ReplyDelete
  10. @ Kusu muliyala-> ತುಂಬು ಹೃದಯದ ಧನ್ಯವಾದ ಸರ್,.

    ReplyDelete
  11. ನಿರಾಶೆಯು ಮುಗಿದು ನಲಿವಿನ ಕ್ಷಣಗಳು ಸಿಗುತ್ತಿರಲಿ.
    ಬರೆದಿದ್ದು ಚೆನ್ನಾಗಿದೆ.

    ReplyDelete

ಧೂಳು ಕಣವಾದರೂನು ಏಳುತ್ತೆನೆ.