Tuesday, September 14, 2010

ವಿಸ್ಮಯ ಸೃಷ್ಟಿ


ಸ್ಪರ್ಶವಾಗುವ ತಂಗಾಳಿ
ಆವಿಯಾಗುವ ನೀರು
ಮುಟ್ಟಲಾರದ ಸೂರ್ಯನ ಪ್ರಖರತೆ
ಪ್ರಪಾತದಿಂದ ಬುಗಿಲೇಳುವ
ಬುಗ್ಗೆಗಳು,ಅಂತರ್ಜಲಗಳು,
ಕಂಡರೂ ಕಾಣದಂತೆ,ಸ್ಪರ್ಶವಾದರೂ ಕಾಣದಂತೆ
ನೋಡಿದರೂ ಸ್ಪರ್ಶವಾಗಲಾರದ
ನಿನ್ನ ಅನೇಕ ಸೃಷ್ಟಿಗಳು
ನಿರಂತರ ಮೆರೆಯುತ್ತಿವೆ.


ಕಲೆಗಾರರು,ಕವಿಗಳು
ಜ್ನಾನಿಗಳು,ವಿಜ್ನಾನಿಗಳು,
ಶಿಲ್ಪಗಳು,ಸಂಗೀತ ವಿದ್ವಾನರು
ಕದಡಿದ ಕನಸುಗಳ
ಹಿಡಿದಿಟ್ಟ ನೆನಪುಗಳ
ಚದುರಿದ ಶಬ್ದಗಳ
ನೆನಪಿನಂಗಳದಲಿ ರಂಗೋಲಿ ಹಾಕಿ
ಬಣ್ಣ ಬಣ್ಣದ ಕುಂಚಗಳಲ್ಲಿ
ಕವನದ ಸಾಲುಗಳಲ್ಲಿ
ಮಧುರ ಗಾಯನದಲ್ಲಿ
ಕಲ್ಲು ಬಂಡೆಗಳಲ್ಲಿ
ಗಿಡ-ಮರಗಳಲ್ಲಿ
ಬೆಳಕು ಧ್ವನಿಗಳಲ್ಲಿ...




ಚಿತ್ರ ಕೃಪೆ:artgallary

8 comments:

  1. ಸ೦ಜು ಅವರೆ,
    ಸೃಷ್ಟಿಯ ವಿಸ್ಮಯಕೆ ಕೊನೆಯೆ ಇಲ್ಲ ..ಬಣ್ಣಿಸಲಸದಳ..:)
    nice...keep writing..

    ReplyDelete
  2. ಸಂಜಯ,
    ಪರಮಾತ್ಮನ ಸೃಷ್ಟಿಗೆ ಬೆರಗಾದ ಮನುಷ್ಯನು ಕಲೆಯಲ್ಲಿ ಸೃಷ್ಟಿಯ ಪ್ರತಿಬಿಂಬ ಹಿಡಿಯಲು ಪ್ರಯತ್ನಿಸುವ ಅಲೋಚನೆ ಚೆನ್ನಾಗಿದೆ. ನಿಮ್ಮ ಕವನವೂ ಸೃಷ್ಟಿಕಾರ್ಯದ ಪ್ರತಿಬಿಂಬವೇ ಅಲ್ಲವೆ?

    ReplyDelete
  3. ಕವನ ತುಂಬಾ ಚೆನ್ನಾಗಿದೆ.ನನ್ನ ಬ್ಲಾಗಿಗೂ ಬನ್ನಿ.

    ReplyDelete
  4. @ ಮನಮುಕ್ತಾ -> ನಿಜ ಹೇಳೀದ್ರಿ ಮನಮುಕ್ತಾ ಸೃಷ್ಟಿಯ ಕಾಲದಲ್ಲಿ ಸಿಕ್ಕ ನಾವೆಲ್ಲ ಬರೀ ಗೊಂಬೆಗಳು.ಸೃಷ್ಟಿಯ ಅಂತರಾಳವನ್ನು ಬಲ್ಲವರಾರುಇಲ್ಲ . .

    ಧನ್ಯವಾದಗಳು.

    ReplyDelete
  5. @ ಡಾ.ಗುರುಮೂರ್ತಿ -> ನಮಸ್ತೇ ಸರ್ . .ತುಂಬು ಹೃದಯದ ಧನ್ಯವಾದ,.

    ReplyDelete
  6. @ sunaath -> ಹೌದು ಇದು ಸೃಷ್ಟಿಕಾರ್ಯದ ಕಲೆಯನ್ನು ಸೇರೆಹಿಡಿಯುವ ಪ್ರತಿಬಿಂಬ ಅಷ್ಟೆ. ಭಗವಂತಾ ಸೃಷ್ಟಿಸಿದ ಈ ಸೃಷ್ಟಿಯ ವಿಸ್ಮಯಗಳನ್ನು ಅಳೇಯುವು ಶಕ್ತಿ ಯಾರಲ್ಲಿಯೂ ಇಲ್ಲ ಅದೊಂದು ಅಂತ್ಯ ಇಲ್ಲದ ನಿಗೂಡತೆ.ನಾವು ಅವುಗಳನ್ನು ಬರೀ ಭ್ರಮಿಸಬಹುದು ಹೋರತಾಗಿ ಅದನ್ನು ಹೀಗೆ ಅಂತಾ ಹೇಳಲಿಕ್ಕಾಗುವುದಿಲ್ಲ.

    ReplyDelete
  7. @Dr.Krishnamurthy -> ತುಂಬು ಹೃದಯದ ಧನ್ಯವಾದಗಳು.

    ReplyDelete

ಧೂಳು ಕಣವಾದರೂನು ಏಳುತ್ತೆನೆ.