Friday, October 29, 2010

ರಭಸದ ಗೆಲುವುಗಳು





ಕೊನೆಯವರೆಗೂ
ಶಾಶ್ವತ ಗೆಲುವಾಗಲೆಂದು
ಬಾವನೆಗಳ ಆಣೆಕಟ್ಟು ಕಟ್ಟಿ
ಸಹಜ, ಸರಲ
ಜೀವನಕೆ ಎದುರಾಗಿ
ಮರೆಯಾಗಿ
ಅಡ್ಡನಿಂತ
ಗೆಲುವಿನೆಲೆಗಳ ರಭಸದ
ಒತ್ತಡಕೆ 
ಸುಳಿಯಾಗಿ 
ಪಾತಾಳಕ್ಕಿಳಿದು
ಮತ್ತೇ ಮೇಲೆದ್ದು
ಬಂದಾಗ ಈ ದೇಹ
ಶವವಾಗಿ ತೇಲಿಹೋದ
ತಪ್ಪಲಿನಂತೆ
ದಡಕ್ಕಪ್ಪಳಿಸಿ ಬಿದ್ದಿರುವೆ.






ಚಿತ್ರ ಕೃಪೆ: fineartamerica

Tuesday, September 14, 2010

ವಿಸ್ಮಯ ಸೃಷ್ಟಿ


ಸ್ಪರ್ಶವಾಗುವ ತಂಗಾಳಿ
ಆವಿಯಾಗುವ ನೀರು
ಮುಟ್ಟಲಾರದ ಸೂರ್ಯನ ಪ್ರಖರತೆ
ಪ್ರಪಾತದಿಂದ ಬುಗಿಲೇಳುವ
ಬುಗ್ಗೆಗಳು,ಅಂತರ್ಜಲಗಳು,
ಕಂಡರೂ ಕಾಣದಂತೆ,ಸ್ಪರ್ಶವಾದರೂ ಕಾಣದಂತೆ
ನೋಡಿದರೂ ಸ್ಪರ್ಶವಾಗಲಾರದ
ನಿನ್ನ ಅನೇಕ ಸೃಷ್ಟಿಗಳು
ನಿರಂತರ ಮೆರೆಯುತ್ತಿವೆ.


ಕಲೆಗಾರರು,ಕವಿಗಳು
ಜ್ನಾನಿಗಳು,ವಿಜ್ನಾನಿಗಳು,
ಶಿಲ್ಪಗಳು,ಸಂಗೀತ ವಿದ್ವಾನರು
ಕದಡಿದ ಕನಸುಗಳ
ಹಿಡಿದಿಟ್ಟ ನೆನಪುಗಳ
ಚದುರಿದ ಶಬ್ದಗಳ
ನೆನಪಿನಂಗಳದಲಿ ರಂಗೋಲಿ ಹಾಕಿ
ಬಣ್ಣ ಬಣ್ಣದ ಕುಂಚಗಳಲ್ಲಿ
ಕವನದ ಸಾಲುಗಳಲ್ಲಿ
ಮಧುರ ಗಾಯನದಲ್ಲಿ
ಕಲ್ಲು ಬಂಡೆಗಳಲ್ಲಿ
ಗಿಡ-ಮರಗಳಲ್ಲಿ
ಬೆಳಕು ಧ್ವನಿಗಳಲ್ಲಿ...




ಚಿತ್ರ ಕೃಪೆ:artgallary

Monday, July 5, 2010

ಮನದನ್ನೆ


ಅಂದು ನೋಡಿದ ಗೆಳತಿ
ಎಂದು ಬರುವೀ ನೀನು?
ಬಂದೇ ತೀರುವೆನೆಂದೆ
ಮಾತು ಕೊಟ್ಟವಳೆ . . .

ಚಂದಿರನ ಬೆಳಕಿನಲಿ
ಹತ್ತಿರ ಕುಳಿತು ನೀ
ಅಂದು ಇಂದಿಗೆ ಎಂದು
ನನ್ನರಸ ಅಂದವಳು . . .

ಕಣ್ತುಂಬ ತುಂಬಿರುವ
ಮನತುಂಬ ಹಬ್ಬಿರುವಿ
ಭಾವತಡಕಾಡಿದೆ
ಬಾ ಗೆಳತಿ ನನ್ನ ಬಳಿ . . .

ನಿನ್ನ ನೆನಪಿನ ಬಳ್ಳಿ
ಮೈತುಂಬ ಸುತ್ತಿದೆ
ನುಟ್ಟುಸಿರ ಬೇಗೆಯಲಿ
ಬಾಡಾಲು ಬಿಡಲಾರೆ . . .

ಮುಂಗಾರಿ ಮಿಂಚಾಗಿ
ಚಿಂಗಾರಿ ಓಡಿ ಬಾ
ಆಸರೆಗೆ ಮರವಾಗಿ
ನಿಂತಿರುವೆ ನಿನಗಾಗಿ . . .

ಸುಳಿಗಾಳಿ ಸುಳಿಗಳಲಿ
ಉಲಿದಿರುವೆ ನಿನ್ಹೆಸರು
ಬಾನಿನ ಅಗಲಿನಲಿ
ಬರೆದಿರುವೆ ನಿನ್ಹೆಸರು . . .

ಕೇಳಿಯಾದರು ಬಾ
ಓದಿಯಾದರು ಬಾ
ಬಾ ಗೆಳತಿ ಬಾರೆ
ಬರಡು ಹೈನಾದಂತೆ . . .

ಯಾರು ತಡೆದರು ನೀ
ಮುದುಡದೇ ಮುಂದೆ ಬಾ
ಮಾಡಿಕೊಳ್ಳುವೆ ನಿನ್ನ
ಮನದನ್ನೆ ಯಾಗಿ . . .

ಚಿತ್ರ ಕೃಪೆ : internationalreporter

Thursday, June 24, 2010

ಮತ್ತೆ ನೀ ಇಳಿದು ಬಾ















ಪ್ರೀತಿಯ ನೆರಳಲ್ಲಿ
ಬಿಸಿಯುಸಿರಿನ ಹೆಜ್ಜೆಗಳಲ್ಲಿ
ಜೀವರಾಗದ ಅಲೆಗಳಲ್ಲಿ
ಶಿಬಿರ ತಲುಪುವ ಆತುರದಲ್ಲಿ
ಎಲ್ಲೋ ಎಡವಿದೆವು ನಾವು


ನೀನು ದಿಗಂತದಲ್ಲಿ
ನಾನು ಪ್ರಪಾತದಲ್ಲಿ...
ಮತ್ತೆ ನೀ ಇಳಿದು ಬಾ ಭುವಿಗೆ
ನಾ ಆವಿಯಾಗಿ ಮೇಲೇರುವೆ.


ನಮ್ಮಿಬ್ಬರ ಸಂಧಿ
ವಸಂತ ಸೃಷ್ಟಿಯ
ಚಿತ್ರ,ವಿಚಿತ್ರಗಳ
ಸಂವೇದನಗಳಲ್ಲಿ
ಹೊಸ ಜಲಪಾತವ ಸೃಷ್ಠಿಸೋಣ.



ಪ್ರಿತಿಯ ಲೆಖ್ಖ

















ನಾನು ದಿನಗಳನ್ನು
ಕೂಡಿಸಿದಂತೆಲ್ಲಾ
ನೀನು ತಿಂಗಳಿನಿಂದ
ಕಳೆಯುತ್ತಾ ಹೋದೆ
ಅದಕ್ಕೆ ಏನೋ
ನಾ...ನಿನಗೆ
ನೀ...ನನಗೆ
ಅಜಗಜಾಂತರ ದೂರ
ಆದರೆ ಈ
ಲೆಖ್ಕ ಹಾಕುವ
ಸವಿ ನೆನೆಪುಗಳೇ
ಗುಣಕಗಳಾ ಪರಿವರ್ತನೆ ಹೊಂದಿ
ಹೃದಯವನ್ನು
ಭಾಗಿಸಿದಾಗಲೆಲ್ಲ
ಮತ್ತೆ ಮತ್ತೆ
ಉಳಿಯುವ ನಿನ್ನ
ಆ - ಶೇಷಗಳು....
ಸೂತ್ರಗಳು ....
ಕತ್ತಲಲ್ಲಿ
ಉಸಿರಾಡುತ್ತವೆ.


ಚಿತ್ರ ಕೃಪೆ:farm2

Tuesday, June 8, 2010

ನೆನಪುಗಳು
























ನೆನಪುಗಳು
ಸಿ(ಕ)ಹಿಯನ್ನು
ಸೃಷ್ಟಿಸಬಹುದು
ಆದ್ರೆ ಭಾವನೆಗಳು?
             ದೇಹವನ್ನು ಕೊರೆದು ಕೊರೆದು
             ಜಾಡನ್ನು ಮಾಡುವಾಗ
             ಹೃದಯ
             ಕಲ್ಲಾಗಿ,ಹಸಿ ಮೇಣವಾಗಿ
             ಕರಗಿ,ನೀರಾಗಿ,
             ಬಿಸಿ ನೀರಿನ ಬುಗ್ಗೆಗಳಾಗಿ
             ಚಿಮ್ಮಿ,ಚಿಮ್ಮಿ ಹರಿದು
             ಸತ್ವಹೀನವಾಗಿ
             ಸಂಕುಚನಗೊಂಡು
             ಮಲಗಿ
             ಮಲಗುವಾಗ
             ಮತ್ತೆ ಪ್ರೀತಿಯ
             ಸೆಲೆ
             ಸೃಷ್ಟಿಸುವ ಈ
             ಅನುಭವಗಳು
             ನೆನೆಪಾದಾಗ
             ನೆನಪುಗಳ
             ಅನುಭವಗಳು
             ಕ್ಷಣಿಕವಾಗುತ್ತವೆ.


ಚಿತ್ರ ಕೃಪೆ:fc01.deviantart

ಧೂಳು ಕಣವಾದರೂನು ಏಳುತ್ತೆನೆ.