Tuesday, January 19, 2010

"ಪ್ರೇಮ ಬಿರುಗಾಳಿಯದ್ದ ಕಡಲು - ಸ್ನೇಹ ಪ್ರಶಾಂತ ಸಾಗರ"ಆ ಇಬ್ಬರು ಯಾವತ್ತು ,ಜೋಡಿಗಳು ಯಾವ ಸಂದಭ್ರದಲ್ಲೂ ಒಬ್ಬದಿಗೊಬ್ಬರು ದೂರ ಇರಲಾರರು.ಅವಳ ಸಲ್ವಾರ್ ಕಮೀಜ್ ಆಕ್ಯೆ ಆತನ ಟೀ - ಶಟ್ ಆಯ್ಕೆ ಆಕೆಯದ್ದೇ. ವಾರಕ್ಕೋಮ್ಮೆ ಒಟ್ಟಿಗೆ ಊಟ ತಿಂಡಿ,ತಿಂಗಳಿಗೋಮ್ಮೆ ಐಸ್-ಕ್ರೀಂ ಪಾರ್ಲರ್, ಮೂರು ತಿಂಗಳಿಗೊಮ್ಮೆ ಎಲ್ಲಿಗೊ ಜೊತೆಯಾಗಿ ಪಯಣ,ಪ್ರತಿದಿನವೊ ಜಗತ್ತಿನ ಹತ್ತಾರು ವಿಷಯಗಳ ಚರ್ಚೆ ಮಧ್ಯೆ ವಾದ,ಕಿರು ಜಗಳ,ಹುಸಿಮುಸಿಯಿಂದ ಕೆಂಪೇರುವ ಆಕೆಯ ಮುಖ,ಮತ್ತೆ ಕೆಲವೇ ನಿಮಿಷಗಳಲ್ಲಿ ಒಂದೇ ಒಂದು SORRY ಕೂಡ ಇಲ್ಲದೆಯೇ ರಾಜಿ,ಮತ್ತೆ ಶುರುವಾಗುವ ಸಂತೋಷ ದು:ಖಗಳ ವಿನಿಮಯ ಕಾರ್ಯ.ಹಾಗೆಯೇ ಅವನ ಮನೆಯಲ್ಲಿ ಆಕೆಗೊಂದು ಆದರದ ಆಹ್ವಾನ; ಇವಳ ಮನೆಯಲ್ಲಿ ಆತನಿಗೆ ಪ್ರೀತಿ,ಸನ್ಮಾನ.

ಹೀಗೆ ಕೆಲ ಹುಡುಗ ಹುಡುಗಿಯರ ನಡುವೆ ಇಂಥದೊಂದು ಸಂಭಂಧವನ್ನು ವಾವೆಲ್ಲ ನೊಡಿರಿತ್ತೇವೆ.ಇಬ್ಬರ ನಡುವೆ ಏನೋ ಸಂಭಂಧವನ್ನು ಅನ್ವೇಷಿಸಿರುತ್ತೇವೆ.ಜೊತೆಯಾಗಿ ಹೊರಟಾಗ LOVE ಜೋರಾಗಿದೆ ಎನ್ನುತ್ತೇವೆ.ಮ್ತ್ತೇನೋ ಕಥೆ ಕಟ್ತಿರುತ್ತೇವೆ.ಅಷ್ಟಕ್ಕೂ ಅವರು ಪ್ರೇಮಿಗಳಲ್ಲ ಎನ್ನಲು ಹೊರಗಿನ ಪ್ರಪಂಚದ ಬಳಿ ಯಾವ ಆಧಾರಗಳು ಇರುವದಿಲ್ಲಾ.ಅವರ ಪಿಸು ಮಾತು,ನಗೆ,ಸಂತೊಷ-ನೋವುಗಳನ್ನು ಪರಸ್ಪರ ಹಂಚಿಕೊಳ್ಳವ ಪರಿ,ನೀಡುವ ಸಾಂತ್ವನ ಎಲ್ಲ ಒನ್ ಆಂಡ್ ದಿ ಸೇಮ್.ಆದರೆ ಇವೆಲ್ಲಾ ಸಂಭಂಧಗಳು ಪ್ರೀತಿಯಲ್ಲಿಯೂ ಇದ್ದರೂ ಕೂಡ,ಪ್ರೀತಿಯು ಎಲ್ಲೇಮೀರಿದ, ದೈಹಿಕ ಕಾಮನೆಗಳ ಬೌಂದರಿಯಾಚೆಗೆ ನೆಗೆದ ಸಿಕ್ಸರ್(SIXER)ನಂತಿರುವ ಅನ್ಯೋನ್ಯ ಸ್ನೇಹ ಆತ್ಮಿಯತೆಅದಾಗಿರಬಹುದು.ಹೆಚ್ಚಿನವರು ಪ್ರತಿಬಾರಿಯೂ ಈ ಸಂಭಂಧಗಳ ಅಥ್ಯೆ ಸುವಿಕೆಯಲ್ಲಿ ಎಡುವುವ ಜಾಗವೊಂದು ಅದೇ,ಪ್ರೀತಿ-ಸ್ನೇಹದ ನಡುವಿನ ಸೂಕ್ಷ್ಮವಾದ ತೆಳುಗೆರೆಯನ್ನು ಕಾಣವಲ್ಲಿ ತಮ್ಮಿಬ್ಬರ ಸ್ಂಭಂಧವನ್ನು ಸರಿಯಾಗಿ ವ್ಯಾಖ್ಯಾನ ಮಾಡಿಕೊಳ್ಳಲಾಗದೇ ಅನೇಕ ಹುಡುಗ-ಹುಡುಗೀಯರು ಇಕ್ಕಟ್ಟಿಗೆ ಸಿಲುಕಿಕೋಳ್ಳುತ್ತಾರೆ.ಹುಡುಗಿಯ ಸ್ನೇಹವನ್ನು ಪ್ರೇಮವೆಂದು ಹುಡುಗ ತಿಳಿದುಕೊಂಡರೆ ಹುಡುಗನನ್ನು ಸ್ನೇಹಿತನಂತೆ ಕಂಡ ಹುಡುಗಿಗೆ ಅವನ ಈ ಪ್ರೇಮ ಒಬ್ಬರಿಗೊಬ್ಬರು ಹಂಚಿಕೊಳ್ಳಲು ಹೆದರುವ ಕಾರಣವೂ ಈ ಸ್ನೇಹ-ಪ್ರೇಮಗ್ಳ ತೆಳು ಪದರದ ನವಿರತೆಯೆ? ನಾ ಪ್ರೇಮವೆಂದದ್ದು ಸ್ನೇಹವಾಗಿದ್ದರೆ ಇರುವ ಸಂಭಂದವೂ ಚೂರಾಗುವ ಭಯವಿರುತ್ತದೆ.

ಮೂಲಭೂತವಾಗಿ ಸ್ನೇಹ-ಪ್ರೇಮಗಳ ನಡುವಿನ ಚಟುವಟಿಕೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿದ್ದರೂ ಮುಖ್ಯವಾಗಿ ಅಲ್ಲಿನ ಮನಸ್ಸಿನ ಅಗೋಚರ ಭಾವನೆಗಳ ನಡುವೆ ಮಹದಂತವಿದೆ.ಸ್ನೇಹ ಯಾವತ್ತೂ ಹುಟ್ಟುವುದು ಎರಡು ಪ್ರಭುದ್ದ ಮನಸ್ಸುಗಳ ನಡುವೆ,ಆದರೆ ಪ್ರೀತಿಗೆ ಪ್ರಭುದ್ಢತೆಯ ಹಂಗಿಲ್ಲಾ.ಅದು ಯಾರ ಹೃದಯದಲ್ಲೂ ಹುಟ್ಟಬಹುದು .ಸ್ನೇಹದ ಉಗಮಕ್ಕೆ ಸಮಾನ ಮನಸ್ಸುಗಳ ಅಗತ್ಯವಿದ್ದರೆ,ಪ್ರೀತಿಗೆ ಸಮಾನ ಹೃದಯ ಸಾಕು.ಭಾವನೆಗಳ ಮಿಲನವಾದ ಈ ಪ್ರೀತಿಯಲ್ಲಿ ಸ್ವಾರ್ಥವಿದೆ. ’ ಡಿಮಾಂಡ್’ಗಳಿವೆ.ಜಗತ್ತಿನಲ್ಲಿ ತಾವಿಬ್ಬರೇ ಎಂಬ ಗುಂಗಿನಲ್ಲಿ ಪ್ರೀತಿಸುವರಿದ್ದಾರೆ;ಸ್ನೇಹದಲ್ಲಿ ಎಲ್ಲರೂ ನಮ್ಮವರೇ ಎಂಬ ಭಾವವಿರುತ್ತದೆ.ಒಳಿತಿಗಾಗಿ ನಿಸ್ವಾಥ್ರ ಹಾರೈಕೆಗಳಿರುತ್ತವೆ.ಇದಕ್ಕೆ ಅಲ್ಲಿರುವ ಆಲೋಚನೆಗಳೆ ಸಮ್ಮಿಲನವೇ ಕಾರಣ.
ಪ್ರೀತಿಯನ್ನು ಒಬ್ಬರಿಗಿಂತ ಹೆಚ್ಚಿನವರ್ಲ್ಲಿ ಹಂಚಿಕೋಳ್ಳುವುದು ಸಾಧ್ಯ? ಹಂಚಿಕೊಂಡರೆ ಅದು ದ್ರೊಹವಾಗುತ್ತದೆ.ಆದರೆ ಏಕಕಾಲದಲ್ಲಿ ಹತ್ತಾರುಮಂದಿಯ್ ಸ್ನೇಹವನ್ನು ಒಟ್ಟಾಗಿ ಹಂಚಿಕೊಳ್ಳಬಹುದು.ಆಲೋಚಿಸಿ ನೋಡಿ ಮದುವೆಯಾದ ಗಂಡು ಅಥವಾ ಹೆಣ್ಣು ’ ತನ್ನ ಪ್ರೀಯತಮೆಯಾಗಿದ್ದಳು ಇವಳು ’ ’ ಈತ ತನ್ನ ಪ್ರಿಯಕರನಾಗಿದ ’ಎನ್ನಲು ಸಾಧ್ಯಚಿದೆಯೆ? ಆದರೆ ಈತ(ಈಕೆ) ತ್ನ್ನ BEST FRIEND ಅಗಿದ್ದ(ಳು) ಎಂದು ಖುಷಿಯಿಂದ ಹೇಳಿಕೋಳ್ಳಲು ಖಂಡಿತಾ ಸಾಧ್ಯ. ಇದಕ್ಕೇ ಹೇಳೂವುದು ಒಂದು ತೆಳುಗೆರೆ ಎಟ್ಷೋಂದು ಅಂತರ ಕೊಡುತ್ತದೆ ಎಂದು.
ಪ್ರೀತಿ ಆಕಾಂಕ್ಷೆಗಳಿಂದ ಕೂಡಿದ ಮನಸ್ಸಿನ ತುಮುಲ್ವಾದರೆ ಸ್ನೇಹ ಆಕಾಂಕ್ಷೆರಹಿತ ಆವೇಗವಿಲ್ಲದ ಪ್ರಶಾಂತ ಸಾಗರ. ಪ್ರೇಮಿಗಳಿಬ್ಬರೂ ಬಯಲಲ್ಲಿ ಹೋಗುತ್ತಿದ್ದಾಗ ಯಾರಾದರೂ ನೋಡಿ ಏನೆಂದಾರೋ ಎಂದು ಭಯ ಒಂದೆಡೆಯಿದ್ದರೆ ಒಟ್ಟೊಟ್ಟಿಗೆ ಕುಳಿತು Enjoy ಮಾಡುವಂತೆ ಮರ್ಕಟ ಮನಸ್ಸು ಪ್ರೇರೇಪಿಸುತ್ತದೆ.ಸ್ನೇಹದಲ್ಲಿ ಯಾವತ್ತೂ ಜಾಗದ ಕಣ್ತಪ್ಪಿಸುವ ಭಯವಾಗಲಿ. ಉದ್ದೇಶವಾಗಲಿ ಇಲ್ಲ. ಅಲ್ಲಿ ಇಬ್ಬರ ನಡುವೆ ಒಂದು ಅರ್ಥಪೊರ್ಣ GAP ಇದ್ದೇ ಇರುತ್ತದೆ. ದಿನಗಟ್ಟಲೆ,ವಾರಗಟ್ಟಲೆ ಒಟ್ಟಾಗಿ ಕುಳಿತು, ಮಲಗಿ ಹರಟೆದ್ರೂ ದೈಹಿಕ ಕಾಮನೆಗಳು ಉದ್ಭವಿಸಲಾರದು.

ಸ್ನೇಹ ಯಾವತ್ತು ಮುಕ್ತ ಪ್ರೀತಿಯಂತೆ ಮುಚಿಡುವ ಅವಶ್ಯಕತೆಯಿಲ್ಲ just because they have decided to be friends.ಯಾವನೊಬ್ಬ ತನ್ನ ಸ್ನೇಹಿತನನ್ನು ಹೊಗಳುತ್ತಿರುಚುದನ್ನು ಕಂಡರೆ ಸಂಭ್ರಮಿಸುತ್ತಾನೆ. ತೆಗಳಿದರೆ .... ವಿಮಶ್ರೇ ಮಾಡಿ ಪ್ರತ್ಯುತ್ತರ ನೀಡುತ್ತಾನೆ.ಪ್ರೇಮಿಯೋಬ್ಬ ಅಷ್ಟು liberal ಆಗಿರುವುದಿಲ್ಲ. ತನ್ನ ಪ್ರೇಯಸಿಯನ್ನು ಹೊಗಳಿದಾಗ ಸಂಶಯದ ಹೆಡೆಯೆತ್ತುತ್ತಾನೆ.ತೆಗಳಿದರೆ ತನ್ನ ಆಯ್ಕೆಯ ಬಗ್ಗೆ ಮರಗುತ್ತಾನೆ. ಸ್ನೇಹಕ್ಕೆ ಅಂತ್ಯವಿಲ್ಲ. ಪ್ರೀತಿಯಂತೆ ಸಾವಿರ ಸಾವಿರ ಸತ್ವಪರಿಕ್ಷೆಗಳಲ್ಲಿ ಮನಸ್ಸು ಮುರುದುಕೊಳ್ಳುವ ಸಂಭಂಧಕ್ಕೆ ತಲಾಕ್ ನೀಡುವ ಮಾತೇ ಇಲ್ಲ.ಸರಸವಾಗಲೀ ವಿರಸವಾಗಲೀ,ಸ್ನೇಹವನ್ನು ಬಲಪಡಿಸುವುದೇ ವಿನ: ಜೀರ್ಣಿಸುವಿದಿಲ್ಲ.Hot words make real cold friendship ಅಂತಾರಲ್ಲಾ, ಹಾಗೆ. ನಿಮ್ಮ ಆತ್ಮೀಯ ಗೆಳೆಯ ಎನಿಸಿದವರಾರೂ ನಿಮ್ಮಿಂದಾದ ಚಿಕ್ಕಪುಟ್ಟ ಲೋಪದೋಷಗಳಿಂದಾಗಲಿ ಅಥಾವಾ ನಿಮ್ಮಲ್ಲಿರುವ negative point ಗಳಿಗಾಗಲಿ ಸ್ನೇಹಕ್ಕೆ ತಿಲಾಂಜಲಿ ಇಡುವುದಿಲ್ಲಾ.ಒಬ್ಬ ಉತ್ತಮ ಸ್ನೇಹಿತ(ತೆ) ಎಂದರೆ.... A Best friend is one ,who knows all about you and also likes you......ಹೀಗೆ ಬದುಕಿನಲ್ಲಿ ಎದಡು ಜೀವಿಗಳ ನಡುವೆ ಪ್ರೇಮಕ್ಕಿಂತ ನಿರ್ಮಲವಾದ ಸ್ನೇಹಕ್ಕೇನೇ ಹೆಚ್ಚು ತಾಕತ್ತು.ಏಕೆಂದರೆ ಇಲ್ಲಿ ಯಾವುದೆ ಮುಚ್ಚು ಮರೆಯ ಅಗತ್ಯವಿಲ್ಲ.ಯಾರಿಗೂ ಹೆದರಬೇಕಾಗಿಲ್ಲ. ಅದು ಸಾಯುವ ಭೀತಿಯಿಲ್ಲ.ನೋವಿನ ಸಂಧರ್ಭದ್ಲ್ಲಿ,ಶಾಶ್ವತವಾಗಿ ಸಂತೋಷ ಕ್ಷಣ್ಗಳಲ್ಲಿ ಒಂದಿಷ್ಟು ಸಂಭ್ರಮವಾಗಿ ಜೀವನಪರ್ಯಂತ ಜೊತೆಯಾಗಿರುವ್ ಸ್ನೇಹವೇ ’ GRATE ' .

ಧೂಳು ಕಣವಾದರೂನು ಏಳುತ್ತೆನೆ.