Sunday, February 14, 2010

ನಾನೊಬ್ಬ ಕವಿ

















ನಾನು ಒಬ್ಬ ಕವಿ
ಬರೆಯಲು ಪುಟ ಸಾಲದು
ಹಟ ಬಿಡದು
ಭಾವನೆಗಳ ಗೂಡಿದು,

ಅಂದೆಂದೋ ಬರೆದ ಕವನಗಳು
ಬಸಿರಾಗಿ ನಿಂತರೂ
ಯಾರೂ ಕೇಳಲಿಲ್ಲ ನೋಡಲಿಲ್ಲ.

ಆ ಕವನಗಳ ಕಂದಮ್ಮಗಳಾಗಿ
ಬೆಳಕಿನೆಡೆಗೆ ಬರದೇ
ಬಿಳಿ ಹಾಳೆಗಳ ಮಡಿಲಲೇ ಹೊರಳಾಡಿದವು
ಕೂಗಿದವು ಆ ಕೂಗು ಕೇಳದಾದವು.

ದಿನಕಳೆದವು ತಿಂಗಳುಗಳೇ ಕಳೆದವು
ಯಾವುದೋ ಹೃದಯಕೆ ಕವಿಯ
ಕೂಗು ಕೇಳಿತು ಆ ಸ್ಫೂರ್ತಿಗೆ
ನನ್ನ ನಮನ ಹರಿಯುವುದಿನ್ನ.
ಸೆಳೆಯಿತು ಕವಿ ಹತ್ತಿರ
ಎಲ್ಲರ ಗಮನ.





ಚಿತ್ರ ಕೃಪೆ : emich.edu

4 comments:

  1. ಒಳ್ಳೆಯ ಪ್ರಯತ್ನ, ಬರೀತಾ ಇರಿ ! ಗುಡ್ ಲಕ್ !

    ReplyDelete
  2. @ ವಿ.ಆರ್.ಭಟ್ -> ಧನ್ಯವಾದ ಸರ್ . .ನಿಮ್ಮಂಥವರ ಪ್ರೋತ್ಸಾಹ ಇದ್ರೆ ನಾವು ಸಹ ಬರೀತಾ ಇರಬಹುದು . .:)

    ReplyDelete
  3. @ kuusu Muliyala -> ಧನ್ಯವಾದ ಸರ್ . . .:)

    ReplyDelete

ಧೂಳು ಕಣವಾದರೂನು ಏಳುತ್ತೆನೆ.