Thursday, June 24, 2010

ಮತ್ತೆ ನೀ ಇಳಿದು ಬಾ















ಪ್ರೀತಿಯ ನೆರಳಲ್ಲಿ
ಬಿಸಿಯುಸಿರಿನ ಹೆಜ್ಜೆಗಳಲ್ಲಿ
ಜೀವರಾಗದ ಅಲೆಗಳಲ್ಲಿ
ಶಿಬಿರ ತಲುಪುವ ಆತುರದಲ್ಲಿ
ಎಲ್ಲೋ ಎಡವಿದೆವು ನಾವು


ನೀನು ದಿಗಂತದಲ್ಲಿ
ನಾನು ಪ್ರಪಾತದಲ್ಲಿ...
ಮತ್ತೆ ನೀ ಇಳಿದು ಬಾ ಭುವಿಗೆ
ನಾ ಆವಿಯಾಗಿ ಮೇಲೇರುವೆ.


ನಮ್ಮಿಬ್ಬರ ಸಂಧಿ
ವಸಂತ ಸೃಷ್ಟಿಯ
ಚಿತ್ರ,ವಿಚಿತ್ರಗಳ
ಸಂವೇದನಗಳಲ್ಲಿ
ಹೊಸ ಜಲಪಾತವ ಸೃಷ್ಠಿಸೋಣ.



ಪ್ರಿತಿಯ ಲೆಖ್ಖ

















ನಾನು ದಿನಗಳನ್ನು
ಕೂಡಿಸಿದಂತೆಲ್ಲಾ
ನೀನು ತಿಂಗಳಿನಿಂದ
ಕಳೆಯುತ್ತಾ ಹೋದೆ
ಅದಕ್ಕೆ ಏನೋ
ನಾ...ನಿನಗೆ
ನೀ...ನನಗೆ
ಅಜಗಜಾಂತರ ದೂರ
ಆದರೆ ಈ
ಲೆಖ್ಕ ಹಾಕುವ
ಸವಿ ನೆನೆಪುಗಳೇ
ಗುಣಕಗಳಾ ಪರಿವರ್ತನೆ ಹೊಂದಿ
ಹೃದಯವನ್ನು
ಭಾಗಿಸಿದಾಗಲೆಲ್ಲ
ಮತ್ತೆ ಮತ್ತೆ
ಉಳಿಯುವ ನಿನ್ನ
ಆ - ಶೇಷಗಳು....
ಸೂತ್ರಗಳು ....
ಕತ್ತಲಲ್ಲಿ
ಉಸಿರಾಡುತ್ತವೆ.


ಚಿತ್ರ ಕೃಪೆ:farm2

Tuesday, June 8, 2010

ನೆನಪುಗಳು
























ನೆನಪುಗಳು
ಸಿ(ಕ)ಹಿಯನ್ನು
ಸೃಷ್ಟಿಸಬಹುದು
ಆದ್ರೆ ಭಾವನೆಗಳು?
             ದೇಹವನ್ನು ಕೊರೆದು ಕೊರೆದು
             ಜಾಡನ್ನು ಮಾಡುವಾಗ
             ಹೃದಯ
             ಕಲ್ಲಾಗಿ,ಹಸಿ ಮೇಣವಾಗಿ
             ಕರಗಿ,ನೀರಾಗಿ,
             ಬಿಸಿ ನೀರಿನ ಬುಗ್ಗೆಗಳಾಗಿ
             ಚಿಮ್ಮಿ,ಚಿಮ್ಮಿ ಹರಿದು
             ಸತ್ವಹೀನವಾಗಿ
             ಸಂಕುಚನಗೊಂಡು
             ಮಲಗಿ
             ಮಲಗುವಾಗ
             ಮತ್ತೆ ಪ್ರೀತಿಯ
             ಸೆಲೆ
             ಸೃಷ್ಟಿಸುವ ಈ
             ಅನುಭವಗಳು
             ನೆನೆಪಾದಾಗ
             ನೆನಪುಗಳ
             ಅನುಭವಗಳು
             ಕ್ಷಣಿಕವಾಗುತ್ತವೆ.


ಚಿತ್ರ ಕೃಪೆ:fc01.deviantart

ಕನಸುಗಳ ರೂಪ























ಶಾಪಗ್ರಸ್ಥರಂತೆ
ಸಾವಿರ ಸಾವಿರ ಶತಮಾನದಿ
ಬಿಸಿಲು,ಗಾಳಿ,ಮಳೆಗಳ ಕೊರೆತಕ್ಕೆ
ಕಾಡು ಬಂಡೆಯಾಗಿ ದಿಗಂತದಲ್ಲಿ
ನಿಂತಿದ್ದ ನಮ್ಮನ್ನು
ಕೆಳಗಿಳಿಸಿ,ಚಾಣ,ಸುತ್ತಿಗೆಯಿಂದ
ಕಡಿದು,ಬಡಿ-ಬಡಿದು
ನೀನು ಬೆವರಿಳಿಸಿದಂತೆಲ್ಲಾ
ನಾವು ಅಂತರ್ಮುಖಿಯಾಗಿ ನಿನ್ನ
ಶಿಲ್ಪ ಚೈತನ್ಯವನ್ನು ಹಾಡಿ,ಹೊಗಳಿದ್ದು
ಕಾಣಿಸಲಿಲ್ಲ,ಕೇಳೀಸಲಿಲ್ಲ
ಓ ಅಮರ ಶಿಲ್ಪಿಯೇ
ಇನ್ನು ನಮ್ಮ ಹೃದಯವ
ತಟ್ಟಿ ತಟ್ಟಿ ನೋಯಿಸಬೇಡ
ಈಗಾಗಲೇ ನಾವು
ನಿನ್ನ ಕನಸುಗಳ
ಸುಂದರ ಶಿಲ್ಪಗಳ
 ರೂಪ ಹೊಂದಿದ್ದೇವೆ
ರೂಪ ಹೊಂದಿದ್ದೇವೆ.

ಚಿತ್ರ ಕೃಪೆ:totalmel

ಧೂಳು ಕಣವಾದರೂನು ಏಳುತ್ತೆನೆ.