Monday, May 10, 2010

ಮನಸು



















ಓ,
ಮನಸು, ಬಿತ್ತದಿರು ಭಾವನೆಗಳ ಕನಸು
ಇರುವದೆಂತು ಸೊಗಸು
ಆಗುವದೆಂದು ನನಸು||


ಚಂಚಲತೆಯ ಮೂಡಿಸಿ ಮಾಡದಿರು
ನೀ ಹೃದಯ ಘಾಸಿ
ಹೂವಕಂಪ ತೋರಿಸಿ
ಬರಿ ಬಾನನಲಿ ಹಾರಾಡಿಸಿ||


ಎಲ್ಲೆಲ್ಲಿಯೊ ಓಡಾಡಿಸಿ
ಬಿಸಿಲ ಕುದುರೆನೇರಿಸಿ
ಮರೀಚಿಕೆ ನೀ ಮಾಡಿಸಿ||


ಕನ್ನಡಿ ಎದುರು ನಿಂತ ಬಾಲೆಗೆ
ನೂರೆಂಟು ಆಸೆಗಳ ನೀ ತುಂಬದಿರು
ಕಂಡರಿಯದ ದುಂಬಿಯನು
ನೀ ಎದುರು ಕರೆಸದಿರು||


ಪ್ರೇಮ ಕಾಮಗಳನು ತುಂಬಿಸಿ
ನಗುತ ನಿಲ್ಲದಿರು
ಜಾತಿ-ಭೇಧ,ಕೋಮುಗಲಭೆ
ನಡೆಸಿ ಮಾಯಾವಾಗಿ ಎಲ್ಲಿಗೊ
ಹೋದ ಮನಸು ಕವಿಯ
ಕಲ್ಪನೆಗೆ ಇದು ಇನ್ನೂ ಕೂಸು||

8 comments:

  1. ಮನಸ್ಸಿಗೆ ಬುದ್ಧಿವಾದ ಹೇಳಿದ ರೀತಿ ಇಷ್ಟವಾಯ್ತು.
    ಚೆನ್ನಾಗಿ ಮೂಡಿಬಂದಿದೆ ಕವನ.

    ReplyDelete
  2. @ ಮನದಾಳದ ಮಾತಿನಿಂದ -> ಧನ್ಯವಾದ . .;)

    ReplyDelete
  3. very nice poem. and for ur previous post, a song which i love very much. that is the first song i always start to sing whenever rain starts. thank u very much ..

    ReplyDelete
  4. @ ಗೌತಮ್ -> ಧನ್ಯವಾದ ಗೌತಮ್ ಅವರಿಗೆ.

    ReplyDelete
  5. @ NRK -> Thanks you Boss!! yes u are ryte that songs is really awesome . .!

    ReplyDelete
  6. ಒಳ್ಳೆಯ ಕವನ...

    ReplyDelete

ಧೂಳು ಕಣವಾದರೂನು ಏಳುತ್ತೆನೆ.