Friday, March 19, 2010

ರೂಪಸಿಗೆ























ತುಟಿಯ ಕಚ್ಚಿ ಮನವ ಬಿಚ್ಚಿ
ಆಸೆಗಳ ಮುಚ್ಚಿ ಬಾವಗಳು ಬೆಚ್ಚಿ
ಹೃದಯ ದೀಪ ಹಚ್ಚಿನಿಂತ ರೂಪಸಿ ||


ಮನಸೆಂಬ ಗಾಳೀಪಟಕೆ
ಹೃದಯವೆಂಬ ಸೂತ್ರ ಕಟ್ಟಿ
ಭಾವನೆಗಳೆಂಬ ಆಕಾಶಕ್ಕೆ ಹಾರಿಬಿಟ್ಟೆ ನೀನು ||


ತುಂಬು ಹೃದಯ ನೀಡು ನೀನು
ಒಂಟಿ ಹಕ್ಕಿ ಹಾಡು ನಾನು
ಬೆಳದಿಂಗಳ ಬಸಿರು ನೀಲಿ ಬಾನು ||


ನೀಳ ಸೊಂಟ ಕಂಠ ಕೋಗಿಲೆ ನೀನು
ಬಿರಿದ ಒಡಲು ನಾಭಿ ಬಟ್ಟಲೋಳು ಹಾಲು-ಜೇನು
ದುಂಡು ಮಲ್ಲಿಗೆ ಹೋಗುವೆ ಎಲ್ಲಿ ನಿನ್ನ ನಾ ಬಲ್ಲೆನು ||


ಓ ರೂಪಸಿ ಯನಕೆ ನೀ ಅರಸಿ
ನಾಟ್ಯ ರಾಣಿ ಜಿಂಕೆ ನಯನದ ಊರ್ವಶಿ
ಅರಳಿ ನಿಂತ ಹರಯಕೆ ರಾಗ-ತಾಳ ನಾ ಬೆರಸಿ.||




ಚಿತ್ರ ಕೃಪೆ :☆Mi☺Λmor☆'s photostream

14 comments:

  1. nice one
    "ಮನಸೆಂಬ ಗಾಳೀಪಟಕೆ
    ಹೃದಯವೆಂಬ ಸೂತ್ರ ಕಟ್ಟಿ
    ಭಾವನೆಗಳೆಂಬ ಆಕಾಶಕ್ಕೆ ಹಾರಿಬಿಟ್ಟೆ ನೀನು "
    ಸುಂದರ ಸಾಲುಗಳು.

    ReplyDelete
  2. @ ಗೌತಮ್ -> ತುಂಬು ಹೃದಯದ ಧನ್ಯವಾದ ಗೆಳೆಯ . .:)

    ReplyDelete
  3. @ ಮನದಾಳದ ಪ್ರವೀಣ ಅವರಿಗೆ -> ಮನದಾಳದ ಧನ್ಯವಾದ . .

    ReplyDelete
  4. @ kuusu Muliyala -> ಧನ್ಯವಾದ ಸರ್ . .

    ReplyDelete
  5. @ ಚುಕ್ಕಿಚಿತ್ತಾರದ ಸಹೋದರಿ ವಿಜಯಶ್ರಿಗೆ - ಧನ್ಯವಾದ . .:)

    ReplyDelete
  6. @ ಮನಮುಕ್ತದ ಓಡತಿಗೆ -> ಧನ್ಯವಾದ . .

    ReplyDelete
  7. chennagide...keep writing...
    Raaghu

    ReplyDelete
  8. @ raghu -> ಧನ್ಯವಾದ ಗೆಳೆಯ . . ;)

    ReplyDelete
  9. @ subrahmanya -> ತುಂಬು ಹೃದಯದ ಧನ್ಯವಾದ . .:)

    ReplyDelete

ಧೂಳು ಕಣವಾದರೂನು ಏಳುತ್ತೆನೆ.