ಮುಂಗಾರಿನ ಮುತ್ತಿನ ಹನಿ ನಿಂದೇ ಕಣೇ
ಆ ಮುತ್ತು ಮಾತ್ರ ನನ್ನ ಸೊತ್ತು ಕಣೆ
ಈ ಮಾತನ್ನು ನಂಬು ಓ ನನ್ನ ಜಾಣೇ||
ತಂಗಾಳಿಗೆ ಚೆಲ್ಲಿದ ಮುಂಗುರುಳು ನಿಂದೇ ತಾನೆ
ಮುಂಗುರುಳು ಮುಚ್ಚಿನಿಂತ ಕೆನ್ನೆ ನಂದೇ ತಾನೆ
ಈ ಮಾತ ಮರೆಯದಿರು ಚೆಲುವೆ ನೀನೆ ||೧||
ಹಾರುವ ಸೀರೆಯ ಸೆರಗು ನಿಂದೇ ತಾನೆ
ಸೆರಗನ್ನು ಮುಚ್ಚಿನಿಂತ ಒಡಲು ನಂದೇ ತಾನೆ
ನನ್ನಾಣೆಗೂ ನೀ ನನ್ನ ಪ್ರೇಯಸಿ ತಾನೆ||೨||
ನನಗಾಗಿ ಧರೆಗಿಳಿದ ಅಪ್ಸರೆ ನೀನೆ ತಾನೆ
ಆ ಅಸ್ಪರೆಯ ಹೃದಯ ಕದ್ದ ಚೋರ ನಾನೇ ತಾನೇ
ಬಿಡು ಇನ್ನು ನೀ ಚಿಂತೆಯ ಬಾಳ ಜೋಡಿ ನಾನೇ ತಾನೇ||೩||
ಚಿತ್ರ ಕೃಪೆ :yzabelle0207.files
ಸುಂದರ ಕವನ.
ReplyDeleteಅದೃಷ್ಟವಂತೆ ಬಿಡಿ ನಿಮ್ಮಾಕೆ
ಹೀಗೆ ಮೂಡುತ್ತಿರಲಿ ಸುಂದರ ಕವನಗಳು.
@ ಮನದಾಳದಿಂದ -> ಧನ್ಯವಾದ ಸರ್ . .! ಎಲ್ಲರೂ ಹೀಗೆ ಅಂತಿದ್ದಾರೆ , ನೋಡೋಣ ನಿಮ್ಮೆಲ್ಲರ ಹರಕೆಯಿಂದ ಹಾಗೆ ಆದರೆ ನಾನು ನಿಮಗೆಲ್ಲರಿಗೂ ಕೃತಾರ್ಥ ..
ReplyDeleteಆ ಅಪ್ಸರೆಯ ಜೋಡಿ ನೀವೆ ಎಂದು ನಾವೂ ಸಹ ಆಶಿಸುತ್ತೇವೆ. ಬಹಳ ಚೆನ್ನಾಗಿದೆ
ReplyDeleteಸುಂದರ ಕವನ
ReplyDeleteಬಹಳ ಹಿತವಾಗಿದೆ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಕವನ ಹಿತವಾಗಿದೆ, ಹಾಗೇ ಗಾಳಿಯಲ್ಲಿ ಹೋಗುತ್ತಾ ನಲ್ಲೆಯ ಕಿವಿಯಲ್ಲಿ ಗುಗುನಿಸುವಂತಿದೆ! ಯುಗಾದಿಯ ಶುಭಾಶಯಗಳು
ReplyDelete@ ಮನಸು -> ಹ ಹ! ನಾವು ಎಂದು ಆಶಿಸುತ್ತಿರಾ . . !!:)
ReplyDeleteಸೊಗಸಾದ ಸಾಲುಗಳು..ನವಿರಾದ ಭಾವನೆ..
ReplyDeleteಚೆ೦ದದ ಕವನ.. ಚೆನ್ನಾಗಿದೆ.
@ ಧನ್ಯವಾದ ಸಹೋದರಿ . .
ReplyDelete