ವಿಧಿ ಲಿಖಿತ
ಇದು ಸೃಷ್ಠಿಯ ಸಂಕೇತ
ಯಾರಿಗುಂಟು ಯಾರಿಗಿಲ್ಲ
ಇದ್ದವರಿಗೆ ಏನೂ ಇಲ್ಲ
ಇಲ್ಲದವರಿಗೆ ಅವಕಾಶಗಳೇ ಇಲ್ಲ ||
ಶೃಂಗಾರ ಬಂಗಾರ ತುಂಬಿದೆ ಎಲ್ಲಾ
ಅನುಭವಿಸಲು ಯೋಗವಿಲ್ಲ
ಗಟ್ಟಿ ದೇಹ ತುಂಬು ಮೋಹ
ಇವರಿಗಿನ್ನೂ ಹಸಿವಿನ ದಾಹ ||
ಕೋಟಿ ಲಕ್ಷ ಇದೆ ಎನ್ನುವರೆಲ್ಲ
ತಿನ್ನಲು ಅವರಿಗೆ ಬಾಯಿ ಇಲ್ಲ
ಬಾಯಿ ಇದ್ದು ಬಡತನದಲಿ ಬಿದ್ದು
ಸಿರಿತನದ ಬರದೇ ಸೊರಗಿದೆರಲ್ಲಾ ||
ನಾವು ಅನುಕೊಂಡ ಹಾಗೆ ಏನೂ ಇಲ್ಲ
ಪ್ರಕೃತಿ ನಿಯಮ ಅಳಿಯುವುದಿಲ್ಲ
ಆಶೆ ಆಕಾಂಕ್ಷೆಗಳಿಗೆ ಕೊನೆಯೇ ಇಲ್ಲ
ಯಾರಿಗುಂಟು ಯಾರಿಗಿಲ್ಲ ||
ಚಿತ್ರ ಕೃಪೆ : fc07.deviantart.net
good one, ಅರ್ಥ ತುಂಬಿದ ಸಾಲುಗಳು ಸುಂದರವಾಗಿದೆ. keep writing.............!
ReplyDelete@ praveen -> ತುಂಬ ಧನ್ಯವಾದ ಪ್ರವೀಣ,
ReplyDelete@ ವಿ.ಆರ್.ಭಟ್ -> Thank you sir . .
ReplyDeleteಎಲ್ಲ ಇದೆ ಆದ್ರೆ ಮನಸ್ಸಿಗೆ ನೆಮ್ಮದಿ ಇಲ್ಲ... ಆಗ ಏನು ಇದ್ರೂ ಏನ್ ಪ್ರಯೋಜನ ನೀವೇ ಹೇಳಿ... ಒಳ್ಳೆಯ ಅನಿಸಿಕೆ ಚೆನ್ನಾಗಿ ಬರೆದಿದ್ದೀರಿ... ಬರೆಯುತ್ತಿರಿ..
ReplyDeleteನಿಮ್ಮವ,
ರಾಘು.
This comment has been removed by the author.
ReplyDeletenice poem...
ReplyDelete@ Raghu -> ಅದಕ್ಕೆ ವಿಧಿ ಲಿಖಿತ ಎನ್ನುತ್ತಾರೆ ರಘು ಅವರೆ . .ಧನ್ಯವಾದ :)
ReplyDelete@ ಚುಕ್ಕಿ ಚಿತ್ತಾರ -> ಧಬ್ಯವಾದ ವಿಜಯಶ್ರಿಯವರಿಗೆ . .;)
ReplyDeletetumba chennagide kavana
ReplyDelete@ ಮೃದುಮನಸು -> ತುಂಬು ಹೃದಯದ ಧನ್ಯವಾದ . .;)
ReplyDeletekeep going.good poem sir...
ReplyDelete@ ಗೌತಮ್ -> thank you Boss!
ReplyDeleteಸಂಜು ಎಂಥ ಮುತ್ತಿನಂಥ ಮಾತು....ಇದ್ದವರಿಗೆ ಏನೂ ಇಲ್ಲ...ಇಲ್ಲದವರಿಗೆ ಅವಕಾಶಗಳಿಲ್ಲ...ಸೌವಲತ್ತು ಇದ್ದವರಿಗೆ ಪ್ರತಿಭೆ ಇರುವುದಿಲ್ಲ ಅದು ಇದ್ದವರಿಗೆ ಅದನ್ನು ಪ್ರಕಟಪಡಿಸೋ ಸೌಲತ್ತು ಇರುವುದಿಲ್ಲ ಇದ್ದರೂ ಅದು ಮುಚ್ಚಿಹೋಗುತ್ತೆ...
ReplyDeleteಮುಂದುವರೆಯಲಿ ನಿಮ್ಮ ಕೃಷಿ
@ಜಲನಯನ -> ಧನ್ಯವಾದಗಳು ಸರ್ . . .;)
ReplyDeleteಸ೦ಜು,
ReplyDeleteಕವಿತೆ ಚೆನ್ನಾಗಿದೆ.
ನನ್ನ ಬ್ಲಾಗಿಗೆ ಬ೦ದು ಪ್ರತಿಕ್ರಿಯಿಸಿ ಸಹೋದರಿ ಎ೦ದಿದ್ದು ತು೦ಬಾ ಖುಶಿಯಾಯ್ತು.
ನನಗೆ ಇಲ್ಲಿ ಎಲ್ಲರೂ ಸಹೋದರ ಸಹೋದರಿಯರೇ..ನಿಮ್ಮಿ೦ದಲೂ ನನ್ನ ಬಗ್ಗೆ ಅದನ್ನೇ ಕೇಳಿ ಸ೦ತೋಷವಾಯ್ತು.ಶುಭವಾಗಲಿ.
@ ಮನಮುಕ್ತ -> ಧನ್ಯವಾದ ನನ್ನ ಕವಿತೆಯನ್ನು ಓದಿದ್ದಕ್ಕೆ.
ReplyDeleteಸಹೋದರಾತಿಥ್ಯದಲ್ಲಿ ಒಂದು ಪಾವಿತ್ರತೆ ಇದೆ . .ಅದಕ್ಕೆ ಆ ಸಂಭಂದದ ನಂಟನು ಎಲ್ಲರೂ ಬೇಸೆದುಕೊಳ್ಳಲು ಯಾವಾಗಳು ಹವಣಿಸುತ್ತಿರುತ್ತಾರೆ.