Thursday, March 25, 2010

ವಾಸ್ತವ

























ನಿನ್ನಲ್ಲಿರುವಾಗ ಸಿರಿ ಸಂಪತ್ತು
ಸುತ್ತುವರೆಲ್ಲಾ ನಿನ್ನ ಮನೆಯವಾ
ಕಾಯುವರು ರಾತ್ರಿ ಹಗಲೆನ್ನದೆ ನಿನ್ನ
ಸಂಭಂಡಗಳ ಬೆಸೆತುವರು ಅತೀ ಮುನ್ನ||


ನೀನೇ ಇಂದ್ರ , ನೀನೇ ಚಂದ್ರ ಅನ್ನುವರು
ನೀನೇ ಶಾರುಖ್ ನೀನೇ ಸಲ್ಮಾನ
ನಾವೆಲ್ಲಾ ಇನ್ನು ನಿನಗೆ ಗುಲಾಮ
ಹಚ್ಚುವರು ಕಳ್ಳ ಪ್ರೀತಿಯ ಮಲಾಮ ||


ನಿನ್ನಲ್ಲಿ ಇರದಿರುವಾಗ ಸಿರಿ ಶ್ರೀಮಂತಿಕೆ
ನಾನ್ಯಾರೋ ನೀನ್ಯಾರೋ ಎಂದ್ಳೇಳುವರು
ನಿನ್ನ ಮನೆ ಮುಂದೇ ಕಣ್ಣು ಮುಚ್ಚಿನಡೆವರೋ
ಎದುರು ಬಂದರೆ ಕತ್ತು ಕೆಳಗೆ ಚಲ್ಲುವರೋ
ಇವರು ನಮ್ಮವರು ನಿಮ್ಮವರು
ಬೆನ್ನ ಹಿಂದೆ ನಿಂಟು ನಗುವವರು ||



ಚಿತ್ರ ಕೃಪೆ : s3.images.com

Friday, March 19, 2010

ರೂಪಸಿಗೆ























ತುಟಿಯ ಕಚ್ಚಿ ಮನವ ಬಿಚ್ಚಿ
ಆಸೆಗಳ ಮುಚ್ಚಿ ಬಾವಗಳು ಬೆಚ್ಚಿ
ಹೃದಯ ದೀಪ ಹಚ್ಚಿನಿಂತ ರೂಪಸಿ ||


ಮನಸೆಂಬ ಗಾಳೀಪಟಕೆ
ಹೃದಯವೆಂಬ ಸೂತ್ರ ಕಟ್ಟಿ
ಭಾವನೆಗಳೆಂಬ ಆಕಾಶಕ್ಕೆ ಹಾರಿಬಿಟ್ಟೆ ನೀನು ||


ತುಂಬು ಹೃದಯ ನೀಡು ನೀನು
ಒಂಟಿ ಹಕ್ಕಿ ಹಾಡು ನಾನು
ಬೆಳದಿಂಗಳ ಬಸಿರು ನೀಲಿ ಬಾನು ||


ನೀಳ ಸೊಂಟ ಕಂಠ ಕೋಗಿಲೆ ನೀನು
ಬಿರಿದ ಒಡಲು ನಾಭಿ ಬಟ್ಟಲೋಳು ಹಾಲು-ಜೇನು
ದುಂಡು ಮಲ್ಲಿಗೆ ಹೋಗುವೆ ಎಲ್ಲಿ ನಿನ್ನ ನಾ ಬಲ್ಲೆನು ||


ಓ ರೂಪಸಿ ಯನಕೆ ನೀ ಅರಸಿ
ನಾಟ್ಯ ರಾಣಿ ಜಿಂಕೆ ನಯನದ ಊರ್ವಶಿ
ಅರಳಿ ನಿಂತ ಹರಯಕೆ ರಾಗ-ತಾಳ ನಾ ಬೆರಸಿ.||




ಚಿತ್ರ ಕೃಪೆ :☆Mi☺Λmor☆'s photostream

Sunday, March 14, 2010

ಮುಂಗಾರಿನ ಪ್ರೇಮ















ಮುಂಗಾರಿನ ಮುತ್ತಿನ ಹನಿ ನಿಂದೇ ಕಣೇ
ಆ ಮುತ್ತು ಮಾತ್ರ ನನ್ನ ಸೊತ್ತು ಕಣೆ
ಈ ಮಾತನ್ನು ನಂಬು ಓ ನನ್ನ ಜಾಣೇ||


ತಂಗಾಳಿಗೆ ಚೆಲ್ಲಿದ ಮುಂಗುರುಳು ನಿಂದೇ ತಾನೆ
ಮುಂಗುರುಳು ಮುಚ್ಚಿನಿಂತ ಕೆನ್ನೆ ನಂದೇ ತಾನೆ
ಈ ಮಾತ ಮರೆಯದಿರು ಚೆಲುವೆ ನೀನೆ ||೧||


ಹಾರುವ ಸೀರೆಯ ಸೆರಗು ನಿಂದೇ ತಾನೆ
ಸೆರಗನ್ನು ಮುಚ್ಚಿನಿಂತ ಒಡಲು ನಂದೇ ತಾನೆ
ನನ್ನಾಣೆಗೂ ನೀ ನನ್ನ ಪ್ರೇಯಸಿ ತಾನೆ||೨||


ನನಗಾಗಿ ಧರೆಗಿಳಿದ ಅಪ್ಸರೆ ನೀನೆ ತಾನೆ
ಆ ಅಸ್ಪರೆಯ ಹೃದಯ ಕದ್ದ ಚೋರ ನಾನೇ ತಾನೇ
ಬಿಡು ಇನ್ನು ನೀ ಚಿಂತೆಯ ಬಾಳ ಜೋಡಿ ನಾನೇ ತಾನೇ||೩||


ಚಿತ್ರ ಕೃಪೆ :yzabelle0207.files

Saturday, March 6, 2010

ವಿಧಿ ಲಿಖಿತ



ವಿಧಿ ಲಿಖಿತ
ಇದು ಸೃಷ್ಠಿಯ ಸಂಕೇತ
ಯಾರಿಗುಂಟು ಯಾರಿಗಿಲ್ಲ
ಇದ್ದವರಿಗೆ ಏನೂ ಇಲ್ಲ
ಇಲ್ಲದವರಿಗೆ ಅವಕಾಶಗಳೇ ಇಲ್ಲ ||


ಶೃಂಗಾರ ಬಂಗಾರ ತುಂಬಿದೆ ಎಲ್ಲಾ
ಅನುಭವಿಸಲು ಯೋಗವಿಲ್ಲ
ಗಟ್ಟಿ ದೇಹ ತುಂಬು ಮೋಹ
ಇವರಿಗಿನ್ನೂ ಹಸಿವಿನ ದಾಹ ||


ಕೋಟಿ ಲಕ್ಷ ಇದೆ ಎನ್ನುವರೆಲ್ಲ
ತಿನ್ನಲು ಅವರಿಗೆ ಬಾಯಿ ಇಲ್ಲ
ಬಾಯಿ ಇದ್ದು ಬಡತನದಲಿ ಬಿದ್ದು
ಸಿರಿತನದ ಬರದೇ ಸೊರಗಿದೆರಲ್ಲಾ ||


ನಾವು ಅನುಕೊಂಡ ಹಾಗೆ ಏನೂ ಇಲ್ಲ
ಪ್ರಕೃತಿ ನಿಯಮ ಅಳಿಯುವುದಿಲ್ಲ
ಆಶೆ ಆಕಾಂಕ್ಷೆಗಳಿಗೆ ಕೊನೆಯೇ ಇಲ್ಲ
ಯಾರಿಗುಂಟು ಯಾರಿಗಿಲ್ಲ ||


ಚಿತ್ರ ಕೃಪೆ : fc07.deviantart.net

Thursday, March 4, 2010

ಬಾ-ರತಿ



ಭಾರವಾದ ಎದೆ ಚಲ್ಲಿ ನಿಂತ
ಸೌಂದರ್ಯಗಣಿ ನೀನು
ವರ್ಣಿಸಲು ಭಾವನೆಗಳ ಹುಡುಕುತ
ಹೊರಟ ಕವಿ ನಾನು||


ಅಪ್ಸರೆ ರಂಭೆ ನಿನ್ನ ಮುಂದೆ ಇನ್ನೇನು?
ನೀ ಕಾಣಾದಾದಾಗ ಎನ್ನ ಹೃದಯ
ಬರೀ ಖಾಲಿ ಬಾನು||


ನೂರಾರು ಆಸೆಗಳ ಹೆಣೆದು ನಿಂತ
ನನಗೆ ನಿರಾಶೆಗಳ ನೋವು ಕೊಡುವೇಕೆ ನೀನು
ನಿನ್ನ ಕಣ್ಣ ನೋಟ ಬೆರೆತರೂ
ಹೇಳಲಿಲ್ಲ ಏಕೆ ನಾನು?


ಇನ್ನಾದರೂ ನಿನ್ನ ಹೃದಯ ಮುಟ್ಟಿ
ಕೇಳಿಕೋ ನೀನು ಬರೀ ಮಾತುಗಳಲಿ ಸೆಳೆದು
ಸನಿಹಕೆ ಬರಲಿಲ್ಲ ಇನ್ನೂ ನೀನು||


ನಿನ್ನ ಇಂಚು ಇಂಚು ಅಂದವನು
ಭಾವನೆಗಳಲಿ ಹೀರಿದೆ ನಾನು
ಇನ್ನಾದರೂ ಬೇಗ ಬಾ ರತಿ ನೀನು||




ಚಿತ್ರ ಕೃಪೆ : indiastudychannel.com

ಧೂಳು ಕಣವಾದರೂನು ಏಳುತ್ತೆನೆ.