Monday, July 5, 2010

ಮನದನ್ನೆ


ಅಂದು ನೋಡಿದ ಗೆಳತಿ
ಎಂದು ಬರುವೀ ನೀನು?
ಬಂದೇ ತೀರುವೆನೆಂದೆ
ಮಾತು ಕೊಟ್ಟವಳೆ . . .

ಚಂದಿರನ ಬೆಳಕಿನಲಿ
ಹತ್ತಿರ ಕುಳಿತು ನೀ
ಅಂದು ಇಂದಿಗೆ ಎಂದು
ನನ್ನರಸ ಅಂದವಳು . . .

ಕಣ್ತುಂಬ ತುಂಬಿರುವ
ಮನತುಂಬ ಹಬ್ಬಿರುವಿ
ಭಾವತಡಕಾಡಿದೆ
ಬಾ ಗೆಳತಿ ನನ್ನ ಬಳಿ . . .

ನಿನ್ನ ನೆನಪಿನ ಬಳ್ಳಿ
ಮೈತುಂಬ ಸುತ್ತಿದೆ
ನುಟ್ಟುಸಿರ ಬೇಗೆಯಲಿ
ಬಾಡಾಲು ಬಿಡಲಾರೆ . . .

ಮುಂಗಾರಿ ಮಿಂಚಾಗಿ
ಚಿಂಗಾರಿ ಓಡಿ ಬಾ
ಆಸರೆಗೆ ಮರವಾಗಿ
ನಿಂತಿರುವೆ ನಿನಗಾಗಿ . . .

ಸುಳಿಗಾಳಿ ಸುಳಿಗಳಲಿ
ಉಲಿದಿರುವೆ ನಿನ್ಹೆಸರು
ಬಾನಿನ ಅಗಲಿನಲಿ
ಬರೆದಿರುವೆ ನಿನ್ಹೆಸರು . . .

ಕೇಳಿಯಾದರು ಬಾ
ಓದಿಯಾದರು ಬಾ
ಬಾ ಗೆಳತಿ ಬಾರೆ
ಬರಡು ಹೈನಾದಂತೆ . . .

ಯಾರು ತಡೆದರು ನೀ
ಮುದುಡದೇ ಮುಂದೆ ಬಾ
ಮಾಡಿಕೊಳ್ಳುವೆ ನಿನ್ನ
ಮನದನ್ನೆ ಯಾಗಿ . . .

ಚಿತ್ರ ಕೃಪೆ : internationalreporter

11 comments:

  1. ಒಳ್ಳೆಯ ಪ್ರಯತ್ನ..ನಿಮ್ಮ ಮನದನ್ನೆ ಬೇಗ ಸಿಗಲಿ..
    ನಿಮ್ಮವ,
    ರಾಘು.

    ReplyDelete
  2. ತುಂಬಾ ಸುಂದರ ಕವಿತೆ
    ಒಳ್ಳೆಯ ರಾಗ ಹಾಕಿ ಹಾಡುವಂತಿದೆ

    ReplyDelete
  3. ಸಂಜು. ಎಲ್ಲಿದ್ದಾಳೆ ನಿಮ್ಮ ಮನದನ್ನೆ ಅನ್ನೋದು ಹೇಳಲೆ ಇಲ್ಲ ! ಬಹಳ ಗುಟ್ಟಿನ ಮನುಷ್ಯ ನೀವು ಬಿಡ್ರಿ! ಬಹಳ ಬೇಗ ನಿಮ್ಮ ಮನದನ್ನೆ ನಿಮಗೆ ಸಿಗಲಿ, thanks

    ReplyDelete
  4. @ Rahgu -> :) thak you sir . .Nanu adae shisuttidden . .

    ReplyDelete
  5. @ Gurumurty -> Houda . .Tumba dhanyvada sir . .

    ReplyDelete
  6. @ V.R.Bhat -> Illiddalo anta nau kayta iddini sir , Irlilli guttina rahasy enu illa . .SIkkare nimage modlu parichayisuve . .

    Thaks sir.

    ReplyDelete
  7. ನಿಮ್ಮ ಮನದನ್ನೆ ಆದಷ್ಟು ಬೇಗ ಸಿಗಲೇಂದು ಹಾರೈಸುವೆ.

    ReplyDelete
  8. @ jagadeesh -> Ellara Ashaya Ade agide, Nodona yavaga baruttalo anta . . :)thanks .

    ReplyDelete
  9. Hi sir Tumba chanagide.
    Here is my blog Please look at it and give your suggestions http://rakeshashapur.blogspot.com/
    thank you

    ReplyDelete

ಧೂಳು ಕಣವಾದರೂನು ಏಳುತ್ತೆನೆ.