ನಾನೊಬ್ಬ ಕವಿ
ನಾನು ಒಬ್ಬ ಕವಿ
ಬರೆಯಲು ಪುಟ ಸಾಲದು
ಹಟ ಬಿಡದು
ಭಾವನೆಗಳ ಗೂಡಿದು,
ಅಂದೆಂದೋ ಬರೆದ ಕವನಗಳು
ಬಸಿರಾಗಿ ನಿಂತರೂ
ಯಾರೂ ಕೇಳಲಿಲ್ಲ ನೋಡಲಿಲ್ಲ.
ಆ ಕವನಗಳ ಕಂದಮ್ಮಗಳಾಗಿ
ಬೆಳಕಿನೆಡೆಗೆ ಬರದೇ
ಬಿಳಿ ಹಾಳೆಗಳ ಮಡಿಲಲೇ ಹೊರಳಾಡಿದವು
ಕೂಗಿದವು ಆ ಕೂಗು ಕೇಳದಾದವು.
ದಿನಕಳೆದವು ತಿಂಗಳುಗಳೇ ಕಳೆದವು
ಯಾವುದೋ ಹೃದಯಕೆ ಕವಿಯ
ಕೂಗು ಕೇಳಿತು ಆ ಸ್ಫೂರ್ತಿಗೆ
ನನ್ನ ನಮನ ಹರಿಯುವುದಿನ್ನ.
ಸೆಳೆಯಿತು ಕವಿ ಹತ್ತಿರ
ಎಲ್ಲರ ಗಮನ.
ಚಿತ್ರ ಕೃಪೆ : emich.edu
ಒಳ್ಳೆಯ ಪ್ರಯತ್ನ, ಬರೀತಾ ಇರಿ ! ಗುಡ್ ಲಕ್ !
ReplyDeleteall d best.chennagide.
ReplyDelete@ ವಿ.ಆರ್.ಭಟ್ -> ಧನ್ಯವಾದ ಸರ್ . .ನಿಮ್ಮಂಥವರ ಪ್ರೋತ್ಸಾಹ ಇದ್ರೆ ನಾವು ಸಹ ಬರೀತಾ ಇರಬಹುದು . .:)
ReplyDelete@ kuusu Muliyala -> ಧನ್ಯವಾದ ಸರ್ . . .:)
ReplyDelete