ರಭಸದ ಗೆಲುವುಗಳು
ಕೊನೆಯವರೆಗೂ
ಶಾಶ್ವತ ಗೆಲುವಾಗಲೆಂದು
ಬಾವನೆಗಳ ಆಣೆಕಟ್ಟು ಕಟ್ಟಿ
ಸಹಜ, ಸರಲ
ಜೀವನಕೆ ಎದುರಾಗಿ
ಮರೆಯಾಗಿ
ಅಡ್ಡನಿಂತ
ಗೆಲುವಿನೆಲೆಗಳ ರಭಸದ
ಒತ್ತಡಕೆ
ಸುಳಿಯಾಗಿ
ಪಾತಾಳಕ್ಕಿಳಿದು
ಮತ್ತೇ ಮೇಲೆದ್ದು
ಬಂದಾಗ ಈ ದೇಹ
ಶವವಾಗಿ ತೇಲಿಹೋದ
ತಪ್ಪಲಿನಂತೆ
ದಡಕ್ಕಪ್ಪಳಿಸಿ ಬಿದ್ದಿರುವೆ.
ಚಿತ್ರ ಕೃಪೆ: fineartamerica
ಅರ್ಥಗರ್ಭಿತ ಕವನ,
ReplyDeleteಚೆನ್ನಾಗಿದೆ.
ಕವನ ಚೆ೦ದವಿದೆ. ನಿರಾಶೆ ಯಾಕೆ ಸರ್?
ReplyDeleteಅನ೦ತ್
ಕವನ ಸೊಗಸಾಗಿದೆ. ಜೀವನದಲ್ಲಿ ಸೋಲು,ಗೆಲವು ಇದ್ದದ್ದೇ.ನಿರಾಶರಾಗಬೇಡಿ.
ReplyDeleteಚಂದದ ಕವನ.ನನ್ನ ಬ್ಲಾಗಿನ ಬರಹ ಶತಕ ಪೂರೈಸಿದೆ.ಶತಕದ ಸಂಭ್ರಮ ದಲ್ಲಿ ಪಾಲ್ಗೊಳ್ಳಲು ನನ್ನ ಬ್ಲಾಗಿಗೆ ಸ್ವಾಗತ.ನಮಸ್ಕಾರ.
ReplyDelete@ Praveen -> ತುಂಬು ಹೃದಯದ ಧನ್ಯವಾದ ಸರ್.
ReplyDelete@ anantaraj -> ಒಮ್ಮೊಮ್ಮೆ ಇಂಥಾ ಭಾವನೆಗಳು ನೂ ಬೇಕಲ್ಲಾ ಸರ್ ..ಬರೀ ಸಂತೋಷದ ಕ್ಷಣಗಳೇ ಆಗಿ ಬಿಟ್ರೆ ಜೀವನಕ್ಕೆ ಪ್ರಾಮುಖ್ಯರೆ ಇರುತ್ತಿತ್ತಾ?
ReplyDeleteಧನ್ಯವಾದ .
@ Sunaath -> ಧನ್ಯವಾದ , ಸೋಲನ್ನು ಗೆದ್ದು ಗೆಲುವಿನೆಡೆಗೆ ಬಂದಾಗ ಆದರ ಅನುಭವವೇ ಬೇರೆ ಇರುತ್ತದೆ ಅಂತ ಓದಿದ್ದೆ ಅದರ ಅನುಭವ ಪಡಿಯಬೇಕಾಗಿದೆ.
ReplyDeleteಧನ್ಯವಾದ.
@ Murthy sir-> ಧನ್ಯವಾದ ಸರ್ ..ಖಂಡಿತವಾಗಿ ಬರುವೆ.
ReplyDeleteಸೋಲು ಗಲುವನ್ನು ಸಮಾನವಾಗಿ ಸ್ವೀಕರಿಸುವುದೇ ಜೀವನ ಸ೦ಜು ಅವರೇ.ಚೆ೦ದದ ಕವನಕ್ಕೆ ಅಭಿನ೦ದನೆ."ಸರಲ" ಇದು ಸರಳ ಎ೦ದಾಗಬೇಕಿತ್ತೆ೦ದು ನನ್ನ ಭಾವನೆ.ಹಾಗೆಯೇಬಭೇಟಿ ಕೊಡಿ ನನ್ನ ಬ್ಲಾಗ್ ಗೆ http:// muliyala.blogspot.com
ReplyDelete@ Kusu muliyala-> ತುಂಬು ಹೃದಯದ ಧನ್ಯವಾದ ಸರ್,.
ReplyDeleteನಿರಾಶೆಯು ಮುಗಿದು ನಲಿವಿನ ಕ್ಷಣಗಳು ಸಿಗುತ್ತಿರಲಿ.
ReplyDeleteಬರೆದಿದ್ದು ಚೆನ್ನಾಗಿದೆ.