Monday, July 5, 2010

ಮನದನ್ನೆ


ಅಂದು ನೋಡಿದ ಗೆಳತಿ
ಎಂದು ಬರುವೀ ನೀನು?
ಬಂದೇ ತೀರುವೆನೆಂದೆ
ಮಾತು ಕೊಟ್ಟವಳೆ . . .

ಚಂದಿರನ ಬೆಳಕಿನಲಿ
ಹತ್ತಿರ ಕುಳಿತು ನೀ
ಅಂದು ಇಂದಿಗೆ ಎಂದು
ನನ್ನರಸ ಅಂದವಳು . . .

ಕಣ್ತುಂಬ ತುಂಬಿರುವ
ಮನತುಂಬ ಹಬ್ಬಿರುವಿ
ಭಾವತಡಕಾಡಿದೆ
ಬಾ ಗೆಳತಿ ನನ್ನ ಬಳಿ . . .

ನಿನ್ನ ನೆನಪಿನ ಬಳ್ಳಿ
ಮೈತುಂಬ ಸುತ್ತಿದೆ
ನುಟ್ಟುಸಿರ ಬೇಗೆಯಲಿ
ಬಾಡಾಲು ಬಿಡಲಾರೆ . . .

ಮುಂಗಾರಿ ಮಿಂಚಾಗಿ
ಚಿಂಗಾರಿ ಓಡಿ ಬಾ
ಆಸರೆಗೆ ಮರವಾಗಿ
ನಿಂತಿರುವೆ ನಿನಗಾಗಿ . . .

ಸುಳಿಗಾಳಿ ಸುಳಿಗಳಲಿ
ಉಲಿದಿರುವೆ ನಿನ್ಹೆಸರು
ಬಾನಿನ ಅಗಲಿನಲಿ
ಬರೆದಿರುವೆ ನಿನ್ಹೆಸರು . . .

ಕೇಳಿಯಾದರು ಬಾ
ಓದಿಯಾದರು ಬಾ
ಬಾ ಗೆಳತಿ ಬಾರೆ
ಬರಡು ಹೈನಾದಂತೆ . . .

ಯಾರು ತಡೆದರು ನೀ
ಮುದುಡದೇ ಮುಂದೆ ಬಾ
ಮಾಡಿಕೊಳ್ಳುವೆ ನಿನ್ನ
ಮನದನ್ನೆ ಯಾಗಿ . . .

ಚಿತ್ರ ಕೃಪೆ : internationalreporter

ಧೂಳು ಕಣವಾದರೂನು ಏಳುತ್ತೆನೆ.