ಓ,
ಮನಸು, ಬಿತ್ತದಿರು ಭಾವನೆಗಳ ಕನಸು
ಇರುವದೆಂತು ಸೊಗಸು
ಆಗುವದೆಂದು ನನಸು||
ಚಂಚಲತೆಯ ಮೂಡಿಸಿ ಮಾಡದಿರು
ನೀ ಹೃದಯ ಘಾಸಿ
ಹೂವಕಂಪ ತೋರಿಸಿ
ಬರಿ ಬಾನನಲಿ ಹಾರಾಡಿಸಿ||
ಎಲ್ಲೆಲ್ಲಿಯೊ ಓಡಾಡಿಸಿ
ಬಿಸಿಲ ಕುದುರೆನೇರಿಸಿ
ಮರೀಚಿಕೆ ನೀ ಮಾಡಿಸಿ||
ಕನ್ನಡಿ ಎದುರು ನಿಂತ ಬಾಲೆಗೆ
ನೂರೆಂಟು ಆಸೆಗಳ ನೀ ತುಂಬದಿರು
ಕಂಡರಿಯದ ದುಂಬಿಯನು
ನೀ ಎದುರು ಕರೆಸದಿರು||
ಪ್ರೇಮ ಕಾಮಗಳನು ತುಂಬಿಸಿ
ನಗುತ ನಿಲ್ಲದಿರು
ಜಾತಿ-ಭೇಧ,ಕೋಮುಗಲಭೆ
ನಡೆಸಿ ಮಾಯಾವಾಗಿ ಎಲ್ಲಿಗೊ
ಹೋದ ಮನಸು ಕವಿಯ
ಕಲ್ಪನೆಗೆ ಇದು ಇನ್ನೂ ಕೂಸು||