Wednesday, May 13, 2009

ನಿಮಗಾಗಿ ಕಾಯುತ್ತಿದ್ದೆನೆ . . !



ಮಧ್ಯಾನ್ಹದ ರಣ ರಣ ಬಿಸಿಲು , ಮರಳು ಹುರಿಯುವ ಗಾಳಿ , ಕಣ್ಣು ತೆರೆದರೆ ರಾಚುವ ಝಳ . . ಇಂಥಾ ಕೆಂಡದಂಥಾ ಬಿಸಿಲಿದ್ದರೂ ಸಹ ನಮ್ಮ ಶಾಲೆಯ ಹಿಂಬದಿಯ ಹುಣಸೆ ಮರ ತನ್ನ ಸಾಮರ್ಥ್ಯವನ್ನು ಮೀರದೆ ಬಂದವರಿಗೆಲ್ಲ ತಂಪಾದ ನೆರಳನ್ನು ಬೀಸುತ್ತಿತ್ತು .ಅದೇ ಮರದ ಕೆಳಗೆ ಒಂದು ಚಚ್ಚೌಕವಾದ ಕಲ್ಲು ಅದೆನೋ ಹಳೆಯ ಶಿಲಾಯುಗದ ಮಹಾರಾಜರು ಬಳಸುತ್ತಿದ್ದ ಕಲ್ಲಿನಂತಿತ್ತು . ಮರದ ನೆರಳಿನಲ್ಲಿ ಆ ಕಲ್ಲಿನ ಮೇಲೆ ಕುಳಿತವರಿಗೆ ಆಹಾ! ಅಲ್ಹಾದವೇ ಅಲ್ಹಾದ .


ಆ ಕಲ್ಲಿನ ಮೇಲೆ ಕುಳಿತು ಕೊಳ್ಳಲು ಅದೆಷ್ಟೋ ಶಾಲೆಯ ಹುಡುಗರು ಜಗಳವಾಡಿದ್ದಾರೆ ನಾ ಕಾಣೆ . ಹೌದು ಅಂಥಾ ಪ್ರಾಮುಖ್ಯತೆ ಇತ್ತು ಆ ಕಲ್ಲಿಗೆ . ಅದೆನೋ ಒಂಥರಹದ ಸುಖ ಸಿಗುತ್ತಿತ್ತು ಅದಕ್ಕೆ ಅದೆಂದರೆ ಎಲ್ಲರಿಗೂ ಪ್ರಾಣ ಹೀಗೆ ಜಗಳವಾಡುತ್ತಿದ್ದ ಹುಡುಗರ ಮೋಗದಲ್ಲಿ ಆ ಕಲ್ಲಿನ ಮೇಲೆ ಇದ್ದ ಪ್ರಿತಿ ಅವರ ಕಣ್ಣುಗಳಲ್ಲಿ ಅಗಾಧವಾಗಿ ಹೊಮ್ಮುತ್ತಿರುತ್ತಿತ್ತು .


ಇಂಥಾ ಅದೆಷ್ಟೋ ಜನರನ್ನು ಹೊತ್ತು ಹಲವು ವರುಷಗಳಿಂದ ನಿಂತ ಆ ಕಲ್ಲು ಇವತ್ತು ಯಾರ ಅನಾಮಧೇಯವಿಲ್ಲದಂತೆ ಶಾಲೆಯ ಹಿಂದಿನ ಕೊಳದ ಪಾಲಾಗಿದೆ,ಆ ಕಲ್ಲನ್ನು ತಮ್ಮ ಒಂದು ಅಂಗ ಅಂತ ಭಾವಿಸಿ ತಮ್ಮಲ್ಲಿ ಒಬ್ಬರನ್ನಾಗಿ ಮಾಡಿಕೊಂಡು ಬಿಟ್ಟಿವೆ ಆ ಕೊಳದ ಪರಿಸರ, ಇವತ್ತು ಆ ಕಲ್ಲು ಕೊಳಚೆ ನೀರಿನಲ್ಲಿ ಅರ್ಧ ಮುಳಗಿ ಅದರ ಕಡೆ ಹರೆಯುತ್ತಿರುವ ನಿರನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದೆ . ಕೊಳಚೆ ನಿರಾಗಿದ್ದರಿಂದ ಅದರಲ್ಲಿ ಹರಿದು ಬರುವ ಹೊಲಸು,ಯಾರೋ ಬಾಚಿಕೊಂಡೂ ಕಿತ್ತು ಎಸೆದ ಕೂದಲುಗಳು,ಮುರಿದ ಬಾಚಣಿಕೆ,ಶೇವ್ ಮಾಡಿಕೊಂಡು ಎಸೆದ ಬ್ಲೇಡ್,ಗೀತಾ Ice-Creem ನಲ್ಲಿ ತಿಂದು ಎಸೆದ Ice-Creem ಕಡ್ಡಿ ಮತ್ತು ಡಬ್ಬಿಮುರಿದ ಪೆನ್ನು,ಬಳಸಿದ ಖಡು ಈ ತರಹದ ವಸ್ತುಗಳು ಅದನ್ನು ತಮ್ಮದೇ ಆದ ವಸ್ತು ಎಂದು ಭಾವಿಸಿ ಅದನ್ನು ಸುತ್ತುಗಟ್ಟಿವೆ. ಚರಂಡಿ ನೀರಾಗಿದ್ದರಿಂದ ಅದೇನೋ ಒಂಥರಹದ ಕೋಳಕು ವಾಸನೆ ಆ ಕಲ್ಲನ್ನೂ ಕೂಡಾ ಬಿಟ್ಟಿಲ್ಲಾ ಆ ಕಲ್ಲು ಸಹ ಆ ನೀರನ್ನು Deo-Drunt ನಂತೆ ತನ್ನ ಮೇಲೆ ಸಿಂಪಡಿಸಿಕೊಂಡು ಅದು ಸಹ ಕೊಳಕು ವಾಸನೆಯನ್ನು ಬೀರುತ್ತಿದೆ.

ಅದರ ಮೇಲೆ ಬೆಳೆದ ಪಾಚಿಯನ್ನು ನೋಡಿದರೆ ಇದು ಕಲ್ಲು ಅಂತಾ ಭಾವಿಸುವುದು ಕಷ್ಟವಾಗುತ್ತದೆ.ಅದೇನೋ ಒಂಥರಹದ Lawn ಹಾಸಿದಹಾಗೆ ಅನ್ನಿಸುತ್ತದೆ ಹೀಗೆ ಕಲ್ಲಿನ ಮೇಳೆ ಬೇಳೆದ ಹೂವುಗಳು ಅದರ ಸೌಂದರ್ಯವನ್ನು ಇನ್ನಷ್ಟು ಬೆಳಗುಗೋಳಿಸಿವೆ. ಆ ಕಲ್ಲಿನ ಮೇಲೆ ಬಂದು ಕೂಡುವ ಹಕ್ಕಿ ಸಂಕುಲಗಳಿಗೆ ತುಂಬಾ ಹಿತಕರವಾಗಿದೆ, ಹಿಗೆ ಬಂದು ಹೋಗುವ ಹಕ್ಕಿ ಸಂಕುಲ ತಮ್ಮ ಜೋತೆಗೆ ಆ ಕಲ್ಲಿನ ಋಣವನ್ನು ಹೊತ್ತುಹೋಗುತ್ತವೆ.


ಒಂದಿಷ್ಟೂ ವರುಷಗಳ ಹಿಂದೆ ಅದೆಷ್ಟೋ ಜನ ನನ್ನನ್ನು ಎಷ್ಟು ಪ್ರಿತಿಸುತ್ತಿದ್ದರು, ನನ್ನ ಮೇಲೆ ಕರುಣೆ ಇತ್ತು, ನನ್ನ ಮೇಲೆ ತಮ್ಮ ದಣಿವೆಂಬ ಬೆವರನ್ನು ಹರಿಸಿದರು,ಅದೆಷ್ಟೊ ಜನ ಸ್ನ್ಹೇಹಿತರ ಬಾಂಧವ್ಯವನ್ನು ನನ್ನ ಮೇಲೆ ನಾನು ಅನುಭವಿಸಿದ್ದೇನೆ,ಅದೆಷ್ಟೋ ಹುಡುಗಿಯರ ದಾವಣಿಯನ್ನು ನನ್ನ ಕಾಲಿನಡಿ ಎಳೆದುಕೊಂಡೀದ್ದೇನೆ,ಅದೆಷ್ಟೋ ಪ್ರೇಮಿಗಳ ನಡೂವಿನ ಅಂತರದಲ್ಲಿನ ಮೌನವನ್ನು ಅನುಭವಿಸಿದ್ದೇನೆ,ನನ್ನ ಮೇಲೆ ಕುಳಿತು ಮಕ್ಕಳಿಗೆ ಕೆರೆ-ದಡ,ಕುಂಟು ಮುಟ್ಟಾಟ,ಕಪ್ಪೆ ಸ್ಪರ್ಧೆ ಹೀಗೆ ಎಷ್ಟೊ ಆಟಗಳನ್ನು ಆಡಿಸಿದ ಶಿಕ್ಷಕರ ಆನಂದವನ್ನು ನಾನು ಕಂಡಿದ್ದೇನೆ.


ಹೀಗೆ ಎಷ್ಟೋ ಸಂಕುಲಗಳಿಗೆ ಬೇಕಾದ ನಾನು ಇಂದು ಸುಂಕುಗಟ್ಟಿ ಯಾರ ಆಸರೆ ಇಲ್ಲದೆ ಹೀಗೆ ಬಿದ್ದಿರುವೆ ಯಾರಾದರು ಬಂದು ನನ್ನನ್ನು ನೋಡಿ ಒಂದು ಸಲ ಲುಚುಗುಟ್ಟರೆ ಸಾಕು ನಾನು ಪವಿತ್ರೆ. ಅಹಲ್ಯೆ ಯಂತೆ ಎಷ್ಟೋ ಜನ್ಮದ ಶಾಪ ಕಳೆಯಿತೆಂದು ತಿಳಿದು ಇನ್ನಷ್ಟು ದಿನ ಬದುಕಲು ಪ್ರಯತ್ನಿಸುತ್ತೇನೆ.ನಾನು ಹೇಳುತ್ತಿರುವುದು ಯಾಕೇ ಗೊತ್ತಾ ಹೀಗೆ ನೀವು ನನ್ನನ್ನು ನೋಡಲು ಬಂದರೆ ಬಹುಷ: ನನ್ನ ಮಡಿಲ ಗುಹೆಯೋಳಗೆ ನಿಮ್ಮ ನೆನಪುಗಳ ಬುತ್ತಿಯು ಸಿಗಬಹುದು. ಸೋ! ಒಮ್ಮೆಯಾದರು ನನ್ನನ್ನು ನೋಡಲು ಬನ್ನಿ . .


ನೀಮಗಾಗಿ ಕಾಯುತ್ತಿದ್ದೆನೆ..!

6 comments:

  1. sanjya u r become poet le ...common man you are rocking..

    ReplyDelete
  2. To Harish ->

    Ha Poet adu enu illo pa summ hinga byasara aaglikattittu adakka barade . .

    ReplyDelete
  3. To Prashant ->

    Houdu navu esto jana haleya nenapugala mele hosatarada mahalugalannu kattirutteve . .hosatana balige beku nija aadare haleyadannu mareyuvudu astu sari anta nanage anisuttilla . .

    Hogi banni aa kallina madilalli nimma nenapugalu saha sigabahudu . .;)

    ReplyDelete
  4. hi,,
    very nice..dont knw who r u,,but glad to here that u r from my school,,really cherished all old memories,,,beutiful poetry,,,keep writing,,n make me cherish old memories of our best school n techers..

    ReplyDelete
  5. To Sujata ->

    Thank You . .

    Really those day's are beautiful na . . Our theachers,our campus,our play gorund . . how shoud we forget those one . .

    any way thanks 4 your compliments

    ReplyDelete
  6. your words took me back to our school days,,nice one

    ReplyDelete

ಧೂಳು ಕಣವಾದರೂನು ಏಳುತ್ತೆನೆ.